ಇರಾನ್ ಅಧ್ಯಕ್ಷೀಯ ಚುನಾವಣೆ ನ್ಯಾಯೋಚಿತವಲ್ಲ: ಅಮೆರಿಕ ಟೀಕೆ
Update: 2024-07-07 16:13 GMT
ವಾಷಿಂಗ್ಟನ್ : ಇರಾನ್ ಅಧ್ಯಕ್ಷೀಯ ಚುನಾವಣೆ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ ಮತ್ತು ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಇರಾನ್ ನ ನಿಲುವಿನಲ್ಲಿ ಬದಲಾವಣೆ ತರುವ ನಿರೀಕ್ಷೆಯಿಲ್ಲ ಎಂದು ಅಮೆರಿಕ ಟೀಕಿಸಿದೆ.
ಇರಾನಿನ ಅಧ್ಯಕ್ಷೀಯ ಚುನಾವಣೆ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನತೆ ಮತದಾನದಲ್ಲಿ ಪಾಲ್ಗೊಂಡಿಲ್ಲ. ಈ ಚುನಾವಣೆ ಇರಾನಿನ ನಿಲುವಿನಲ್ಲಿ ಮೂಲಭೂತ ಬದಲಾವಣೆಗೆ ಕಾರಣವಾಗುತ್ತದೆ ಅಥವಾ ಅದರ ನಾಗರಿಕರ ಮಾನವ ಹಕ್ಕುಗಳಿಗೆ ಹೆಚ್ಚಿನ ಗೌರವವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಅಭ್ಯರ್ಥಿಗಳು ಸ್ವತಃ ಹೇಳುವಂತೆ ಇರಾನಿನ ನೀತಿಯನ್ನು ಸರ್ವೋಚ್ಛ ಮುಖಂಡರು ರೂಪಿಸುತ್ತಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು ಚುನಾವಣೆಯು ಇರಾನಿನ ಕುರಿತ ಅಮೆರಿಕದ ನಿಲುವಿನ ಮೇಲೆಯೂ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದಿದೆ.