ಹಮಾಸ್ ಮುಖ್ಯಸ್ಥ ಹನಿಯೆಹ್ ಹತ್ಯೆಯಿಂದ ಕದನ ವಿರಾಮ ಪ್ರಯತ್ನಕ್ಕೆ ಅಡ್ಡಿ: ಬೈಡೆನ್ ಕಳವಳ
Update: 2024-08-02 17:44 GMT
ವಾಶಿಂಗ್ಟನ್ : ಫೆಲೆಸ್ತೀನ್ ಹೋರಾಟ ಸಂಘಟನೆ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಅವರ ಹತ್ಯೆಯು, ಗಾಝಾದಲ್ಲಿ ಕದನವಿರಾಮವನ್ನು ಏರ್ಪಡಿಸುವ ಪರಿಸ್ಥಿತಿ ನಿರ್ಮಿಸಲು ನೆರವಾಗದು ಎಂದು ಅಮೆರಿಕ ಅಧ್ಯಕ್ಷ ಜೋಬೈಡನ್ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ವಾಶಿಂಗ್ಟನ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರನ್ನು, ಹಾನಿಯೆಹ್ ಅವರ ಹತ್ಯೆಯು ಗಾಝಾದಲ್ಲಿ ಕದನವಿರಾಮ ಏರ್ಪಡುವ ಅವಕಾಶಗಳನ್ನು ಭಗ್ನಗೊಳಿಸಿದೆಯೇ ಎಂಬ ಸುದ್ದಿಗಾರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. ಗುರುವಾರ ತಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ನೇರ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.