ನೈತಿಕ ಆಧಾರದಲ್ಲಿ ಇಮ್ರಾನ್ ನ ಮತಪತ್ರ ತಿರಸ್ಕೃತ: ವರದಿ

Update: 2024-01-01 18:23 GMT

 ಇಮ್ರಾನ್‍ಖಾನ್ | Photo: PTI

ಇಸ್ಲಮಾಬಾದ್ : ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ ಖಾನ್ ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೆ ಸಲ್ಲಿಸಿರುವ ನಾಮಪತ್ರವನ್ನು ನೈತಿಕತೆಯ ಆಧಾರದಲ್ಲಿ ತಿರಸ್ಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಗೆ ಇಮ್ರಾನ್‍ಖಾನ್ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಹಲವು ಮುಖಂಡರು ಸಲ್ಲಿಸಿದ್ದ ನಾಮಪತ್ರವನ್ನು ಡಿಸೆಂಬರ್ 30ರಂದು ಚುನಾವಣಾ ಆಯೋಗ ತಿರಸ್ಕರಿಸಿದೆ. ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‍ಖಾನ್ ಅಪರಾಧಿ ಎಂದು ಘೋಷಿಸಲ್ಪಟ್ಟಿರುವುದು ಅವರ ನಾಮಪತ್ರ ತಿರಸ್ಕೃತಗೊಳ್ಳಲು ಪ್ರಮುಖ ಕಾರಣವಾಗಿದ್ದರೆ ನಾಮಪತ್ರವನ್ನು ಅನುಮೋದಿಸಿದವರು ಆಯಾ ಕ್ಷೇತ್ರಕ್ಕೆ ಸೇರಿದವರಲ್ಲ ಎಂಬ ಕಾರಣವನ್ನೂ ನೀಡಲಾಗಿದೆ.

ಈ ಮಧ್ಯೆ, ಪಕ್ಷದ ಹಲವು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಚುನಾವಣಾ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಲು ಪಿಟಿಐ ನಿರ್ಧರಿಸಿರುವುದಾಗಿ `ಡಾನ್' ವರದಿ ಮಾಡಿದೆ. ಕಾನೂನಿನ ಪ್ರಕಾರ, ನಾಮಪತ್ರ ತಿರಸ್ಕರಿಸಿದರೆ ಮೊದಲು ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ನ್ಯಾಯಮಂಡಳಿಯ ಆದೇಶವನ್ನು ಗಮನಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News