ಲಕ್ಷಕ್ಕೂ ಅಧಿಕ 'ಅವಲಂಬಿತ' ಭಾರತೀಯರಿಗೆ ಅಮೆರಿಕದಿಂದ ಗಡಿಪಾರು ಭೀತಿ

Update: 2025-03-06 08:15 IST
ಲಕ್ಷಕ್ಕೂ ಅಧಿಕ ಅವಲಂಬಿತ ಭಾರತೀಯರಿಗೆ ಅಮೆರಿಕದಿಂದ ಗಡಿಪಾರು ಭೀತಿ

ಸಾಂದರ್ಭಿಕ ಚಿತ್ರ PC: istockphoto

  • whatsapp icon

ವಾಷಿಂಗ್ಟನ್: ಎಚ್1-ಬಿ ವೀಸಾ ಪಡೆದು ಅಪ್ರಾಪ್ತ ವಯಸ್ಕರಾಗಿ ಅಮೆರಿಕ ದೇಶಕ್ಕೆ ವಲಸೆ ಬಂದು ಇದೀಗ 21 ವರ್ಷ ತುಂಬುತ್ತಿರುವವರು ತಮ್ಮ ಅಸ್ತಿತ್ವದ ಬಗ್ಗೆ ದ್ವಂದ್ವ ಎದುರಿಸುವಂತಾಗಿದೆ. ಇವರನ್ನು ಎನ್ ಆರ್ ಐ ಪೋಷಕರ (ಎಚ್-4 ವೀಸಾ ಹೊಂದಿರುವವರು) ಅವಲಂಬಿತರು ಎಂದು ಪರಿಗಣಿಸುವಂತಿಲ್ಲ. ಈ ವಯಸ್ಸು ತಲುಪಿದ ಬಳಿಕ ಹೊಸ ವೀಸಾ ಸ್ಥಾನಮಾನವನ್ನು ಆಯ್ಕೆ ಮಾಡಿಕೊಳ್ಳಲು ಅಮೆರಿಕದ ಆಡಳಿತ ಅವರಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ. ಆದರೆ ಇಮಿಗ್ರೇಶನ್ ನಿಯಮಾವಳಿಗೆ ತಂದಿರುವ ಇತ್ತೀಚಿನ ತಿದ್ದುಪಡಿಗಳಿಂದಾಗಿ ಮತ್ತು ನ್ಯಾಯಾಲಯ ಪ್ರಕರಣಗಳಿಂದಾಗಿ ಅವರು ಇದೀಗ ದೇಶದಿಂದ ಹೊರಹಾಕಲ್ಪಡುವ ಭೀತಿ ಎದುರಿಸುತ್ತಿದ್ದಾರೆ.

ಈ ಸಮುದಾಯಕ್ಕೆ ಇದೀಗ ಇರುವ ಭೀತಿಯೆಂದರೆ, ಸ್ವಯಂ ಆಗಿ ಭಾರತಕ್ಕೆ ಗಡೀಪಾರು ಆಗುವುದು ಅಥವಾ ಹೊರಗಿನವರಾಗಿ ಅಮೆರಿಕದಲ್ಲಿ ಜೀವಿಸುವುದು. 2023ರ ಮಾರ್ಚ್ ನಿಂದ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ 1.34 ಲಕ್ಷ ಭಾರತೀಯ ಮಕ್ಕಳು, ಅವರ ಪೋಷಕರು ಗ್ರೀನ್ ಕಾರ್ಡ್ ಪಡೆಯುವ ಮುನ್ನ 'ಅವಲಂಬಿತ' ವೀಸಾ ಪಡೆಯುವ ಅರ್ಹ ವಯಸ್ಸನ್ನು ಮೀರುತ್ತಿದ್ದಾರೆ.

ಟೆಕ್ಸಾಸ್ ನ್ಯಾಯಾಲಯ ಇತ್ತೀಚೆಗೆ ನೀಡಿದ ತೀರ್ಪಿ ನ ಅನ್ವಯ ಡೆಫರ್ಡ್ ಆ್ಯಕ್ಷನ್ ಫಾರ್ ಚೈಲ್ಡ್ ಹುಡ್ ಅರೈವಲ್ಸ್ (ಡಿಎಸಿಎ) ಅಡಿಯಲ್ಲಿ ಹೊಸ ಅರ್ಜಿದಾರರಿಗೆ ಉದ್ಯೋಗ ಪರವಾನಗಿ ನೀಡುವುದನ್ನು ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ. ಡಿಎಸಿಎ ಅಡಿಯಲ್ಲಿ 21 ವರ್ಷ ತುಂಬಿದ ಬಳಿಕ ಪೋಷಕರ ಅವಲಂಬಿತರು ಎಂಬ ಸ್ಥಾನಮಾನಕ್ಕೆ ಅನರ್ಹರಾಗುವ ಮಕ್ಕಳೂ ಸೇರಿದಂತೆ ದಾಖಲೆ ಹೊಂದಿರದ ವಲಸಿಗರಿಗೆ ಗಡೀಪಾರಿನಿಂದ ಎರಡು ವರ್ಷಗಳ ಅವಧಿಗೆ ರಕ್ಷಣೆ ಇರುತ್ತದೆ ಮತ್ತು ಇದನ್ನು ನವೀಕರಿಸಲು ಅವಕಾಶವಿದೆ.

ಈ ನಿಬಂಧನೆಯಿಲ್ಲದೇ ಭಾರತೀಯ ಯುವಜನತೆ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇವರ ಪೋಷಕರು ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದು, ಅವರ ಕಾಯುವಿಕೆ ಅವಧಿ 12 ರಿಂದ 100 ವರ್ಷಗಳ ವರೆಗೆ ಇರುವುದು ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News