ಪಾಕಿಸ್ತಾನದ ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ; 12 ಮಂದಿ ಸಾವು

Update: 2024-03-20 17:25 GMT

ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್: ನೈಋತ್ಯ ಪಾಕಿಸ್ತಾನದ ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ ಸಂಭವಿಸಿ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಇತರ 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದಾರೆ.

ಗಣಿಯ ಆಳದಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಿಥೇನ್ ಗ್ಯಾಸ್ ಸ್ಫೋಟಗೊಂಡಿದ್ದು 8 ಕಾರ್ಮಿಕರನ್ನು ರಕ್ಷಣಾ ತಂಡ ಪಾರು ಮಾಡಿದೆ. ಆದರೆ ಉಳಿದ 12 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದ ಸ್ಥಳೀಯ ತಂಡವೊಂದರ 8 ಮಂದಿಯೂ ಗಣಿಯಾಳದಲ್ಲಿ ಸಿಕ್ಕಿಬಿದ್ದಿದ್ದು ಅವರನ್ನೂ ಸುರಕ್ಷಿತವಾಗಿ ಹೊರಗೆ ತರಲಾಗಿದ್ದು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಬಲೂಚಿಸ್ತಾನ ಪ್ರಾಂತದ ಮುಖ್ಯ ಗಣಿ ಇನ್‍ಸ್ಪೆಕ್ಟರ್ ಅಬ್ದುಲ್ ಘನಿ ಬಲೋಚ್ ಹೇಳಿದ್ದಾರೆ. ಖಾಸಗಿ ನಿರ್ವಹಣೆಯ ಗಣಿ ಇದಾಗಿದ್ದು ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News