ಪಾಕ್: ಮರಣದಂಡನೆ ಶಿಕ್ಷೆ ರದ್ದತಿ ಕೋರಿದ್ದ ಮುಷರಫ್ ಅರ್ಜಿ ವಿಚಾರಣೆ ಆರಂಭ
Update: 2023-11-06 16:53 GMT
ಇಸ್ಲಮಾಬಾದ್: ದೇಶದ್ರೋಹ ಪ್ರಕರಣದಲ್ಲಿ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ, ಈಗ ನಿಧನ ಹೊಂದಿರುವ ಪರ್ವೇಝ್ ಮುಷರಫ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
2013ರಿಂದಲೂ ಈ ಅರ್ಜಿ ವಿಚಾರಣೆಗೆ ಬಾಕಿ ಉಳಿದಿದೆ. ಆದರೆ ಅರ್ಜಿ ದಾಖಲಿಸಿದ್ದ ಮುಷರಫ್ 2023ರ ಫೆಬ್ರವರಿಯಲ್ಲಿ ಮೃತಪಟ್ಟಿದ್ದಾರೆ.
2001ರಿಂದ 2008ರವರೆಗೆ ಅಧ್ಯಕ್ಷರಾಗಿದ್ದ ಮುಷರಫ್, ಸಂವಿಧಾನವನ್ನು ಉಲ್ಲಂಘಿಸಿ ದೇಶದ್ರೋಹ ಎಸಗಿದ್ದಾರೆಂದು 2013ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಮುಷರಫ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮುಷರಫ್, ಚಿಕಿತ್ಸೆಗಾಗಿ ದುಬೈಗೆ ತೆರಳಿದವರು ಅಲ್ಲಿ ಮೃತರಾಗಿದ್ದಾರೆ.