ಇರಾನ್ ಅಧ್ಯಕ್ಷರಾಗಿ ಪೆಝೆಶ್ಕಿಯಾನ್ ಜು.30ರಂದು ಪ್ರಮಾಣವಚನ

Update: 2024-07-10 16:35 GMT

ಮಸೂದ್ ಪೆಝೆಶ್ಕಿಯಾನ್ | PC :  PTI


ಟೆಹರಾನ್ : ಇರಾನ್ ನ ಸುಧಾರಣಾವಾದಿ ನಿಯೋಜಿತ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರು ಜುಲೈ 30ರಂದು ಸಂಸತ್ನಲ್ಲಿ ಪ್ರಮಾಣವಚನ ಸ್ವೀಕರಿಸಲಿ ದ್ದಾರೆಂದು ಶಾಸಕಾಂಗ ಅಧ್ಯಕ್ಷೀಯ ಮಂಡಳಿಯ ಸದಸ್ಯ ಮೊಜ್ತಾಬಾ ಯೂಸೆಫಿ ಅವರು ಬುಧವಾರ ತಿಳಿಸಿದ್ದಾರೆ.

ಯೂಸೆಫಿ ಅವರು ಈ ಮೊದಲು ನೀಡಿದ ಹೇಳಿಕೆಯೊಂದರಲ್ಲಿ ಪೆಝೆಶ್ಕಿಯಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಆಗಸ್ಟ್ 4 ಅಥವಾ 5ರಂದು ನಡೆಯಲಿರುವುದಾಗಿ ತಿಳಿಸಿದ್ದರು.

ಇರಾನ್ ಅಧ್ಯಕ್ಷ ಸ್ತಾನಕ್ಕಾಗಿ ಕಳೆದ ಶುಕ್ರವಾರ ಎರಡನೆ ಸುತ್ತಿನ ಚುನಾವಣೆಯಲ್ಲಿ ಪೆಝೆಶ್ಕಿಯಾನ್ ಅವರು ಕಟ್ಟಾ ಸಂಪ್ರದಾಯವಾದಿ ಸಯೀದ್ ಜಲೀಲ್ ಅವರನ್ನು ಸೋಲಿಸಿದ್ದರು. 69 ವರ್ಷ ಪ್ರಾಯದ ಸುಧಾರಣಾವಾದಿ ನಾಯಕ ಪೆಝೆಶ್ಕಿಯಾನ್ ಅವರು ಚಲಾವಣೆಯಾದ 3 ಕೋಟಿ ಮತಗಳ ಪೈಕಿ ಶೇ.54ರಷ್ಟು ಮತಗಳನ್ನು ಪಡೆದುಕೊಂಡಿದ್ದರು.

ಮೇ ತಿಂಗಳಲ್ಲಿ ನಡೆದ ಹೆಲಿಕಾಪ್ಟರ್ ಅವಘಡದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹೀಂ ರಾಯಿಸಿ ಅವರ ನಿಧನದ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ನಡೆದಿತ್ತು.

ಇರಾನ್ನಲ್ಲಿ ಸರಕಾರದ ಸರ್ವೋಚ್ಚ ನಾಯಕರಾದ ಅಯಾತುಲ್ಲಾ ಅಲಿ ಖಾಮಿನೈ ಅವರು ಅತ್ಯಧಿಕ ಹೊಂದಿರುತ್ತಾರೆ. ಕಳೆದ 35 ವರ್ಷಗಳಿಂದ ಖಾಮಿನೈ ಅವರು ಈ ಹುದ್ದೆಯಲ್ಲಿದ್ದಾರೆ.

ಇರಾನ್ ಅಧ್ಯಕ್ಷರಾಗಿ ಪೆಝೆಶ್ಕಿಯಾನ್ ಜು.30ರಂದು ಪ್ರಮಾಣವಚನ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News