ಫಿಲಿಪ್ಪೀನ್ಸ್: ಗೂಢಚಾರಿಕೆ ಆರೋಪದಲ್ಲಿ ಚೀನಾದ ಇಬ್ಬರು ಪ್ರಜೆಗಳ ಬಂಧನ

Update: 2025-02-25 21:37 IST
ಫಿಲಿಪ್ಪೀನ್ಸ್: ಗೂಢಚಾರಿಕೆ ಆರೋಪದಲ್ಲಿ ಚೀನಾದ ಇಬ್ಬರು ಪ್ರಜೆಗಳ ಬಂಧನ

ಸಾಂದರ್ಭಿಕ ಚಿತ್ರ | PTI

  • whatsapp icon

ಮನಿಲಾ: ಗೂಢಚಾರಿಕೆ ನಡೆಸುತ್ತಿದ್ದ ಚೀನಾದ ಇಬ್ಬರು ಪ್ರಜೆಗಳನ್ನು ಬಂಧಿಸಿರುವುದಾಗಿ ಫಿಲಿಪ್ಪೀನ್ಸ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಉಭಯ ದೇಶಗಳ ನಡುವಿನ ಮುಖಾಮುಖಿ ಹೆಚ್ಚಿರುವಂತೆಯೇ ಬೇಹುಗಾರಿಕೆಗೆ ಸಂಬಂಧಿಸಿ ಎರಡೂ ದೇಶಗಳು ಸರಣಿ ಬಂಧನ ಪ್ರಕ್ರಿಯೆ ಮುಂದುವರಿಸಿವೆ. ಇಬ್ಬರು ಚೀನೀಯರು ಮೂವರು ಫಿಲಿಪ್ಪೀನ್ಸ್ ಪ್ರಜೆಗಳಿಗೆ ಹಣದ ಆಮಿಷವೊಡ್ಡಿ ಆತನ ವಾಹನದಲ್ಲಿ ರಾಜಧಾನಿ ಮನೀಲಾದಾದ್ಯಂತ ಪ್ರಯಾಣಿಸಿದ್ದರು.

ಈ ವೇಳೆ `ಐಎಂಎಸ್‍ಐ ಕ್ಯಾಚರ್' ಬಳಸಿ (ಮೊಬೈಲ್ ಫೋನ್ ಗೋಪುರಗಳ ಸುಮಾರು 3 ಮೀಟರ್ ವ್ಯಾಪ್ತಿಯಲ್ಲಿ ಗಾಳಿಯಿಂದ ಸಂದೇಶಗಳನ್ನು ಸೆಳೆಯುವ ಸಾಧನ) ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಅಧ್ಯಕ್ಷರ ಭವನ, ಅಮೆರಿಕ ರಾಯಭಾರಿ ಕಚೇರಿ, ವಿಲಾಮೊರ್ ವಾಯುನೆಲೆ, ಅಗ್ವಿನಾಲ್ಡೊ ನೌಕಾನೆಲೆಗಳ ಸೂಕ್ಷ್ಮ ಮಾಹಿತಿಗಳನ್ನು ಆರೋಪಿಗಳು ಸಂಗ್ರಹಿಸಿದ್ದಾರೆ. ಐದೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ. ಗೂಢಚಾರಿಕೆ ನಡೆಸುತ್ತಿದ್ದ ಆರು ಚೀನೀ ಪ್ರಜೆಗಳನ್ನು ಜನವರಿಯಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News