ಬ್ರೆಝಿಲ್ | 62 ಜನರಿದ್ದ ವಿಮಾನ ಪತನ
ಸಾವೊ ಪಾಲೊ : ಬ್ರೆಝಿಲ್‌ನ ಸಾವೊ ಪಾಲೊ ರಾಜ್ಯದ ಜನನಿಭಿಡ ಪ್ರದೇಶದಲ್ಲಿ ಶುಕ್ರವಾರ 62 ಜನರಿದ್ದ ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಮೃತಪಟ್ಟವರ ಅಥವಾ ಗಾಯಗೊಂಡವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿಮಾನಯಾನ ಸಂಸ್ಥೆ VoePass ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ 58 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳಿದ್ದ ವಿಮಾನವು ಸಾವೊ ಪಾಲೊದ ಗೌರುಲ್ಹೋಸ್ಗೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ ಎಂದು ದೃಢಪಡಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ವಿನ್ಹೆಡೊ ನಗರದಲ್ಲಿ ವಿಮಾನ ಬಿದ್ದಿದೆ ಎಂದು ಅಗ್ನಿಶಾಮಕ ದಳ ದೃಢಪಡಿಸಿದೆ. ಅಗ್ನಿಶಾಮಕ ದಳದವರು ಅಪಘಾತದ ಸ್ಥಳಕ್ಕೆ ತಂಡಗಳನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೆಝಿಲಿಯನ್ ಟೆಲಿವಿಷನ್ ನೆಟ್‌ವರ್ಕ್ ಗ್ಲೋಬೋನ್ಯೂಸ್ ವಸತಿ ಪ್ರದೇಶದಲ್ಲಿ ವಿಮಾನದಿಂದ ಬೆಂಕಿ ಮತ್ತು ಹೊಗೆ ಹೊರಬರುವ ವೀಡಿಯೊ ಬಿಡುಗಡೆ ಮಾಡಿದೆ. ವಿಮಾನವು ಲಂಬವಾಗಿ ಸುರುಳಿ ಸುತ್ತಿ ಕೆಳಕ್ಕೆ ಬೀಳುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ.
BREAKING: Voepass Flight 2283, a large passenger plane, crashes in Vinhedo, Brazil pic.twitter.com/wmpJLVYbB3
— BNO News (@BNONews) August 9, 2024