ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ರಮಾಫೋಸ ಪುನರಾಯ್ಕೆ

Update: 2024-06-15 16:28 GMT

ಸಿರಿಲ್ ರಮಾಫೋಸ | PC : PTI

ಕೇಪ್‍ಟೌನ್ : ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‍ಸಿ) ಮತ್ತು ಪ್ರಮುಖ ವಿರೋಧ ಪಕ್ಷವಾಗಿದ್ದ ಡೆಮೊಕ್ರಟಿಕ್ ಅಲಯನ್ಸ್ (ಡಿಎ) ಪಕ್ಷದ ನಡುವಿನ ಅಚ್ಚರಿಯ ಒಪ್ಪಂದದ ಬಳಿಕ ಎಎನ್‍ಸಿ ಮುಖಂಡ, ಹಾಲಿ ಅಧ್ಯಕ್ಷ ಸಿರಿಲ್ ರಮಾಫೋಸ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಎರಡನೆ ಅವಧಿಗೆ ಆಯ್ಕೆಯಾಗಿರುವುದಾಗಿ ಘೋಷಿಸಲಾಗಿದೆ.

ಎಎನ್‍ಸಿ ಮತ್ತು ಡಿಎ ಪಕ್ಷದ ಮೈತ್ರಿಸರಕಾರ ರಚನೆಯಾಗಿದ್ದು, ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲು ನಿರ್ಧರಿಸಿರುವುದು ನನಗೆ ದೊರೆತ ಗೌರವವಾಗಿದೆ ಎಂದು ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿರಿಲ್ ರಮಾಫೋಸ ಹೇಳಿದ್ದಾರೆ. ಕಳೆದ ತಿಂಗಳು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಸಾಧಿಸಿರಲಿಲ್ಲ. ದಿ| ನೆಲ್ಸನ್ ಮಂಡೇಲಾ ಸ್ಥಾಪಿಸಿದ್ದ ಎಎನ್‍ಸಿ 3 ದಶಕಗಳ ಬಳಿಕ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿದ್ದರೂ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಸುದೀರ್ಘ ರಾಜಕೀಯ ಕಾರ್ಯತಂತ್ರಗಳ ಬಳಿಕ ಎಎನ್‍ಸಿ, ಡಿಎ ಸೇರಿದಂತೆ 18 ಪಕ್ಷಗಳ ಸಮ್ಮಿಶ್ರ ಸರಕಾರ ರಚನೆಯಾಗಿದೆ.

ಅಧ್ಯಕ್ಷರ ಆಯ್ಕೆಗೆ 400 ಸದಸ್ಯ ಬಲದ ಸಂಸತ್‍ನಲ್ಲಿ ನಡೆದ ರಹಸ್ಯ ಮತದಾನದಲ್ಲಿ 283 ಸದಸ್ಯರು ರಮಫೋಸ ಪರ ಮತ ಚಲಾಯಿಸಿದರು ಎಂದು ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News