ಕೆಂಪು ಸಮುದ್ರ | ಹೌದಿಗಳ 8 ಡ್ರೋನ್ ಹೊಡೆದುರುಳಿಸಿದ ಅಮೆರಿಕ
Update: 2024-06-07 16:19 GMT
ವಾಷಿಂಗ್ಟನ್ : ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಹಡಗನ್ನು ಗುರಿಯಾಗಿಸಿ ಯೆಮನ್‍ನ ಹೌದಿಗಳು ಪ್ರಯೋಗಿಸಿದ 8 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕದ ರಕ್ಷಣಾ ಪಡೆ ಶುಕ್ರವಾರ ಹೇಳಿದೆ.
ಯೆಮನ್‍ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶದಿಂದ ಡ್ರೋನ್‍ಗಳನ್ನು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ. ಇದನ್ನು ಕೆಂಪು ಸಮುದ್ರದಲ್ಲಿ ಭದ್ರತೆಗೆ ನಿಯೋಜಿಸಲಾಗಿರುವ ಅಮೆರಿಕದ ಸಮರನೌಕೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಯಾವುದೇ ಸಾವು-ನೋವು ಅಥವಾ ನಾಶ-ನಷ್ಟದ ವರದಿಯಾಗಿಲ್ಲ ಎಂದು ಅಮೆರಿಕ ಮಿಲಿಟರಿಯ ಸೆಂಟ್ರಲ್ ಕಮಾಂಡ್ ಹೇಳಿದೆ.
ಈ ಮಧ್ಯೆ, ಗುರುವಾರ ರಾತ್ರಿ ಯೆಮನ್‍ನ ಬಂದರು ನಗರ ಮೋಖಾದ ಬಳಿ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ನೌಕೆಯ ಬಳಿ ಭಾರೀ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಯುರೋಪ್‍ನಿಂದ ಯುಎಇ ಕಡೆಗೆ ಸಾಗುತ್ತಿದ್ದ ಸರಕು ನೌಕೆಯನ್ನು ಗುರಿಯಾಗಿಸಿ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಬ್ರಿಟನ್‍ನ ಮೂಲಗಳು ಮಾಹಿತಿ ನೀಡಿವೆ.