ರಶ್ಯ | ಲಂಚ ಪಡೆದ ಆರೋಪ, ಉಪರಕ್ಷಣಾ ಸಚಿವರ ಬಂಧನ

Update: 2024-04-24 18:13 GMT

ಮಾಸ್ಕೋ: ಭಾರೀ ಪ್ರಮಾಣದಲ್ಲಿ ಲಂಚ ಪಡೆದ ಆರೋಪದಲ್ಲಿ ರಶ್ಯದ ಉಪರಕ್ಷಣಾ ಸಚಿವ ಟಿಮುರ್ ಇವನೋವ್‍ರನ್ನು ಬಂಧಿಸಿರುವುದಾಗಿ ರಶ್ಯ ಸರಕಾರದ ಮೂಲಗಳು ಹೇಳಿವೆ.

ಸೇನೆ ನಿರ್ವಹಿಸುವ ನಿರ್ಮಾಣ ಕಾಮಗಾರಿಯ ಉಸ್ತುವಾರಿ ವಹಿಸಿರುವ ಇವನೋವ್‍ರನ್ನು ಕಸ್ಟಡಿಗೆ ಪಡೆಯಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತನಿಖಾ ಸಮಿತಿಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

8 ವರ್ಷದಿಂದ ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವಾನೋವ್, ರಶ್ಯದ ಬಾಂಬ್‍ದಾಳಿಯಲ್ಲಿ ಭಾರೀ ಹಾನಿಗೆ ಒಳಗಾದ ಪೂರ್ವ ಉಕ್ರೇನ್‍ನ ಮರಿಯುಪೋಲ್ ನಗರದ ಮರುನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಪ್ರಮುಖ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದರು. ಅವರನ್ನು ಬಂಧಿಸುವ ಬಗ್ಗೆ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಹಾಗೂ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ಗೆ ಮಾಹಿತಿ ನೀಡಲಾಗಿದೆ. ಇವಾನ್ ಹೆಸರಲ್ಲಿರುವ ಹಲವು ಆಸ್ತಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಪರಾಧ ಸಾಬೀತಾದರೆ ಅವರು 15 ವರ್ಷದವರೆಗೆ ಜೈಲುಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News