ಭದ್ರತಾ ಮಂಡಳಿ ಪರಿಣಾಮಕಾರಿ, ಪ್ರಜಾಸತ್ತಾತ್ಮಕವಾಗಿರಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ

Update: 2024-09-27 15:48 GMT

ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ತನ್ಮಯ್ ಲಾಲ್ | PC : X/@Tanmaya_Lal

ನ್ಯೂಯಾರ್ಕ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್ಎುಸ್ಸಿರ) ಹೆಚ್ಚು ಪರಿಣಾಮಕಾರಿ, ಪ್ರಜಾಸತ್ತಾತ್ಮಕ ಮತ್ತು ಜವಾಬ್ದಾರಿಯುತವಾಗಲು ತುರ್ತು ಸುಧಾರಣೆಯ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯಲ್ಲಿ ಗುರುವಾರ ನಡೆದ `ಶಾಂತಿಗಾಗಿ ನಾಯಕತ್ವ' ವಿಷಯದ ಚರ್ಚೆಯಲ್ಲಿ ವಿಷಯ ಮಂಡಿಸಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ತನ್ಮಯ್ ಲಾಲ್, ಭದ್ರತಾ ಮಂಡಳಿಯಲ್ಲಿ ಸುಧಾರಣೆಗಾಗಿ ಭಾರತದ ದೀರ್ಘಾವಧಿಯ ಪ್ರಯತ್ನವನ್ನು ಪುನರುಚ್ಚರಿಸಿದ್ದಾರೆ. ಭದ್ರತಾ ಮಂಡಳಿಯಲ್ಲಿ ತುರ್ತು ಸುಧಾರಣೆಯಾಗಬೇಕಿದೆ. ಗತಕಾಲದ ವ್ಯವಸ್ಥೆಯು ಹೆಚ್ಚುತ್ತಿರುವ ಜಾಗತಿಕ ಸಂಘರ್ಷಗಳು ಮತ್ತು ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಫಲವಾಗಿದೆ. 8 ದಶಕಗಳಿಗೂ ಹಿಂದೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸ್ಥಾಪನೆಯಾದಾಗ ಹಲವು ಸದಸ್ಯ ದೇಶಗಳು ಇನ್ನೂ ವಸಾಹತುಗಳಾಗಿದ್ದವು. ವಿಶ್ವಸಂಸ್ಥೆಯು ಪ್ರಾತಿನಿಧಿಕ, ಪಾರದರ್ಶಕ, ದಕ್ಷ, ಜವಾಬ್ದಾರ, ಪರಿಣಾಮಕಾರಿ ಮತ್ತು ಪ್ರಜಾಸತ್ತಾತ್ಮಕವಾಗಬೇಕು ಎಂದು ಲಾಲ್ ಪ್ರತಿಪಾದಿಸಿದ್ದಾರೆ.

ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಕೆಲವರು ತಡೆಯುತ್ತಿರುವುದು ಖಂಡನೀಯ. ಇಂತಹ ವಿರೋಧಗಳು ವಿಶ್ವಸಂಸ್ಥೆಯ ನ್ಯಾಯಸಮ್ಮತೆಯನ್ನು ಮತ್ತು ಅಭಿವೃದ್ಧಿ ಪ್ರಯತ್ನಗಳಿಗೆ ಅದರ ಕೊಡುಗೆಯನ್ನು ದುರ್ಬಲಗೊಳಿಸುತ್ತದೆ ಎಂದು ಯಾವುದೇ ದೇಶದ ಹೆಸರೆತ್ತದೆ ಟೀಕಿಸಿದರು.

ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಯನ್ನು ಮತ್ತು ಪ್ರಸ್ತುತ ಜಾಗತಿಕ ಕ್ರಮದ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಉತ್ತಮವಾಗಿ ಪ್ರತಿನಿಧಿಸಲು ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವವನ್ನು ಬಯಸಿದೆ. ವಿವಿಧ ದೇಶಗಳು ಬೆಂಬಲಿಸಿರುವುದರಿಂದ ಈ ಪ್ರಯತ್ನ ಇತ್ತೀಚೆಗೆ ವೇಗ ಪಡೆದುಕೊಂಡಿದೆ.

ಯುಎನ್ಎನಸ್ಸಿ ಪ್ರಸ್ತುತ 15 ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ಐದು ಶಾಶ್ವತ ಸದಸ್ಯರಾದ ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್ ಮತ್ತು ಅಮೆರಿಕ ವೀಟೊ ಅಧಿಕಾರ ಹೊಂದಿವೆ. 10 ಕಾಯಂ ಅಲ್ಲದ ಸದಸ್ಯರನ್ನು 2 ವರ್ಷದ ಅಧಿಕಾರಾವಧಿಗೆ ಆಯ್ಕೆ ಮಾಡಲಾಗುತ್ತದೆ.

ಯುಎನ್ಎಾಸ್ಸಿೆ ಸುಧಾರಣೆಯ ಆಗ್ರಹ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು ಭಾರತ, ಬ್ರೆಝಿಲ್, ಜರ್ಮನಿ ಮತ್ತು ಜಪಾನ್ ಒಳಗೊಂಡಿರುವ `ಗ್ರೂಫ್ ಆಫ್ 4' ಯುಎನ್ಎಲಸ್ಸಿಗ ವಿಸ್ತರಣೆಗೆ ಒತ್ತಾಯಿಸಿವೆ. ಶಾಶ್ವತ ಮತ್ತು ಕಾಯಂ ಅಲ್ಲದ ವಿಭಾಗಗಳಲ್ಲಿ ಆಫ್ರಿಕಾ, ಏಶ್ಯಾ-ಪೆಸಿಫಿಕ್ ಮತ್ತು ಲ್ಯಾಟಿನ್ ಅಮೆರಿಕ ಪ್ರಾಂತಗಳಿಗೆ ಹೆಚ್ಚಿನ ಪ್ರಾತಿನಿಧ್ಯದ ಅವಕಾಶ ಸಿಗಬೇಕೆಂಬ ಆಗ್ರಹ ಹೆಚ್ಚುತ್ತಿದೆ.

► ಚೀನಾದ ವಿರೋಧ

ಸಮಾನ ಪ್ರಾತಿನಿಧ್ಯದ ಪ್ರಶ್ನೆಯು 1979ರಿಂದಲೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿದೆ. ವಿಶ್ವದಾದ್ಯಂತ ವ್ಯಾಪಕವಾದ ಸಂಘರ್ಷದ ಮಧ್ಯೆ ಸುಧಾರಣೆಯ ಕರೆಗಳು ಜೋರಾದವು. ಅಮೆರಿಕದಂತಹ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ದೇಶಗಳು ಯುಎನ್ಎ ಸ್ಸಿಕಯಲ್ಲಿ ಭಾರತದ ಸೇರ್ಪಡೆಗೆ ಬೆಂಬಲ ಸೂಚಿಸುತ್ತಾ ಬಂದಿವೆ. ಆದರೆ ಚೀನಾ ಇದನ್ನು ವಿರೋಧಿಸುತ್ತಿದೆ.  

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News