ಶೋಲ್ ದ್ವೀಪ ನಮ್ಮದೇ: ಚೀನಾಕ್ಕೆ ಫಿಲಿಪ್ಪೀನ್ಸ್ ಸ್ಪಷ್ಟನೆ
Shoal is ours: Philippines clarification to China
Update: 2023-08-07 17:27 GMT
ಮನಿಲಾ : ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಾತ್ಮಕ ಶೋಲ್ ದ್ವೀಪವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಫಿಲಿಪ್ಪೀನ್ಸ್ ಸೋಮವಾರ ಚೀನಾಕ್ಕೆ ಸ್ಪಷ್ಟವಾಗಿ ಹೇಳಿದೆ.
ಶೋಲ್ ದ್ವೀಪದಲ್ಲಿ ಇರುವ ತನ್ನ ಸೇನಾ ತುಕಡಿಗೆ ಸರಕುಗಳನ್ನು ಸಾಗಿಸುವುದಕ್ಕೆ ತಡೆಯೊಡುವ ಪ್ರಯತ್ನವಾಗಿ ಚೀನಾದ ಕರಾವಳಿ ಕಾವಲುಪಡೆ ಜಲಫಿರಂಗಿ ಬಳಸಿ ಅಪಾಯಕಾರಿಯಾಗಿ ವರ್ತಿಸಿದೆ ಎಂದು ಫಿಲಿಪ್ಪೀನ್ಸ್ ಆರೋಪಿಸಿದೆ.
`ಸೆಕೆಂಡ್ ಥೋಮಸ್ ಶೋಲ್ನಲ್ಲಿ ಚೀನಾ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿರುವುದು ಶೋಲ್ನ ಮೇಲಿನ ನಮ್ಮ ಹಿಡಿತವನ್ನು ಸಂರಕ್ಷಿಸುವ ಸಂಕಲ್ಪವನ್ನು ಸಡಿಲಿಸದು. ನಾವು ಎಂದಿಗೂ ಶೋಲ್ ಅನ್ನು ಬಿಟ್ಟುಕೊಡುವುದಿಲ್ಲ' ಎಂದು ಫಿಲಿಪ್ಪೀನ್ಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಅಧಿಕಾರಿ ಜೊನಾಥನ್ ಮಲಾಯ ಹೇಳಿದ್ದಾರೆ.