ದಕ್ಷಿಣ ಸುಡಾನ್ | ವಿಮಾನ ಅಪಘಾತದಲ್ಲಿ 18 ಮಂದಿ ಮೃತ್ಯು
Update: 2025-01-29 22:08 IST

ಸಾಂದರ್ಭಿಕ ಚಿತ್ರ PC : freepik.com
ಜುಬಾ: ದಕ್ಷಿಣ ಸುಡಾನ್‍ನ ಗ್ರಾಮೀಣ ಭಾಗದಲ್ಲಿ ಬುಧವಾರ ಸಣ್ಣ ವಿಮಾನವೊಂದು ಪತನಗೊಂಡಿದ್ದು ಕನಿಷ್ಠ 18 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಚೀನಾದ ತೈಲ ಸಂಸ್ಥೆ ಬಾಡಿಗೆಗೆ ಪಡೆದಿದ್ದ ವಿಮಾನದಲ್ಲಿ ಇಬ್ಬರು ಪೈಲಟ್‍ಗಳ ಸಹಿತ 21 ಮಂದಿ ಪ್ರಯಾಣಿಕರಿದ್ದರು. ದಕ್ಷಿಣ ಸುಡಾನ್‍ನ ರಾಜಧಾನಿಯಾದ ಜುಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ತೈಲ ಸಂಸ್ಕರಣಾಗಾರದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೆ ಒಳಗಾಗಿದೆ. ಅಪಘಾತಕ್ಕೆ ಕಾರಣ ಸ್ಪಷ್ಟವಾಗಿಲ್ಲ ಮತ್ತು ಮೃತಪಟ್ಟವರನ್ನು ಗುರುತಿಸಲಾಗಿಲ್ಲ ಎಂದು ಮಾಹಿತಿ ಸಚಿವ ಗಟ್ವೆಚ್ ಬಿಪಾಲ್ ಮಾಹಿತಿ ನೀಡಿದ್ದಾರೆ.