ಆಗ್ನೇಯ ಇರಾನ್ | ಪ್ರತ್ಯೇಕತಾವಾದಿಗಳ ದಾಳಿಗಳಲ್ಲಿ 6 ಮಂದಿ ಮೃತ್ಯು

Update: 2024-10-02 16:56 GMT

PC : ine.org.pl

ಟೆಹ್ರಾನ್ : ಇರಾನ್‍ನ ಪ್ರಕ್ಷುಬ್ಧ ಆಗ್ನೇಯ ಪ್ರಾಂತದ ಸಿಸ್ತಾನ್ ಮತ್ತು ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳ ಗುಂಡಿನ ದಾಳಿಯಲ್ಲಿ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ)ನ ಸ್ಥಳೀಯ ಮುಖಂಡನ ಸಹಿತ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಟೆಹ್ರಾನ್‍ನಿಂದ ಆಗ್ನೇಯಕ್ಕೆ ಸುಮಾರು 1,350 ಕಿ.ಮೀ ದೂರದಲ್ಲಿರುವ ಸಣ್ಣ ಪಟ್ಟಣವಾದ ಬೆಂಟ್‍ನಲ್ಲಿ ನಡೆದ ಪ್ರಥಮ ದಾಳಿಯಲ್ಲಿ ಐಆರ್‍ಜಿಸಿ ಸ್ಥಳೀಯ ಮುಖಂಡ ಹಾಗೂ ಇಬ್ಬರು ಸದಸ್ಯರ ಸಹಿತ 4 ಮಂದಿ ಮೃತಪಟ್ಟಿದ್ದಾರೆ. ಸಮೀಪದ ಖಾಶ್ ನಗರದಲ್ಲಿ ನಡೆದ ಎರಡನೇ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಎರಡೂ ದಾಳಿಗಳನ್ನು ಬಲೂಚಿಸ್ತಾನದ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಹಕ್ಕುಗಳಿಗೆ ಆಗ್ರಹಿಸುತ್ತಿರುವ ಜೈಶ್ ಅಲ್-ಅದಿಲ್ ಸಶಸ್ತ್ರ ಹೋರಾಟಗಾರರ ಗುಂಪು ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News