ಆಗ್ನೇಯ ಇರಾನ್: ಕನಿಷ್ಠ 9 ಪಾಕ್ ಪ್ರಜೆಗಳ ಹತ್ಯೆ
Update: 2024-02-11 17:35 GMT
ದುಬೈ : ಆಗ್ನೇಯ ಇರಾನ್‍ನಲ್ಲಿ ಗುರುತಿಸಲಾಗದ ಮೂವರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದು ಇತರ 3 ಪಾಕ್ ಪ್ರಜೆಗಳು ಗಾಯಗೊಂಡಿರುವುದಾಗಿ ಪ್ರಾಂತೀಯ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ `ತಸ್ನೀಮ್' ಸುದ್ಧಿಸಂಸ್ಥೆ ರವಿವಾರ ವರದಿ ಮಾಡಿದೆ.
ಇರಾನ್‍ನ 2ನೇ ಅತೀ ದೊಡ್ಡ ಪ್ರಾಂತವಾದ ಸಿಸ್ತಾನ್ ಮತ್ತು ಬಲೂಚೆಸ್ತಾನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಕಳೆದ ತಿಂಗಳೂ ಇದೇ ರೀತಿಯ ಘಟನೆಯಲ್ಲಿ 9 ಪಾಕ್ ಕಾರ್ಮಿಕರು ಮೃತಪಟ್ಟಿದ್ದರು.