ಅಮೆರಿಕ ಚುನಾವಣೆ: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿರುವ ಸುನೀತಾ ವಿಲಿಯಮ್ಸ್, ವಿಲ್ಮೋರ್!

Update: 2024-09-14 07:21 GMT

Photo credit: NASA

ಹೊಸದಿಲ್ಲಿ: ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿದ್ದುಕೊಂಡೆ ಅಮೆರಿಕದ ಅಧ್ಯಕ್ಷಿಯ ಚುನಾವಣೆಗೆ ಮತ ಚಲಾವಣೆ ಮಾಡಲಿದ್ದಾರೆ ಎನ್ನಲಾಗಿದೆ.

ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಟಾರ್‌ ಲೈನರ್‌ ತಾಂತ್ರಿಕ ಸಮಸ್ಯೆಗಳಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದು, ಭೂಮಿಗೆ ವಾಪಾಸ್ಸು ಬರಲು 2025ರ ಫೆಬ್ರವರಿವರೆಗೆ ಕಾಯಬೇಕಾಗುತ್ತದೆ.

ಅಮೆರಿಕದಲ್ಲಿ ನವೆಂಬರ್‌ ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮತಚಲಾಯಿಸಲಿದ್ದಾರೆ.

1997 ರಿಂದ NASA ಗಗನಯಾತ್ರಿಗಳು ಬಾಹ್ಯಾಕಾಶದಿಂದ (ISS) ಮತ ಚಲಾಯಿಸುತ್ತಿದ್ದಾರೆ. ಮತದಾನಕ್ಕೆ ವಿದ್ಯುನ್ಮಾನ ಮತಪತ್ರಗಳನ್ನು ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಮತ್ತು ಹೊರಗೆ ರವಾನಿಸಲಾಗುತ್ತದೆ.

ಬ್ಯಾಲೆಟ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಅವುಗಳನ್ನು ಗಗನಯಾತ್ರಿಗಳು ತುಂಬುತ್ತಾರೆ. ಇದಾದ ನಂತರ ಮತಪತ್ರಗಳನ್ನು ವಿದ್ಯುನ್ಮಾನವಾಗಿ ಭೂಮಿಗೆ ಕಳುಹಿಸಲಾಗುತ್ತದೆ. ಆಗಮನದ ನಂತರ ಅವುಗಳನ್ನು ಸಂರಕ್ಷಿಸಲಾಗುತ್ತದೆ.

ನಾನು ಇಂದು ಮತದಾನಕ್ಕಾಗಿ ನನ್ನ ವಿನಂತಿಯನ್ನು ಕಳುಹಿಸಿದ್ದೇನೆ ಎಂದು ವಿಲ್ಮೋರ್ ಹೇಳಿರುವುದಾಗಿ Fox Weather ವರದಿ ಮಾಡಿದೆ. ಚುನವಾಣೆಯಲ್ಲಿ ಭಾಗವಹಿಸಲು ನಾಗರಿಕರಾಗಿ ನಾವು ಉತ್ಸುಕರಾಗಿದ್ದೇವೆ ಎಂದು ಗಗನಯಾತ್ರಿಗಳು ಹೇಳಿಕೊಂಡಿದ್ದಾರೆ.

1997ರಲ್ಲಿ ಟೆಕ್ಸಾಸ್ ಶಾಸಕರು ನಾಸಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದಾಗ ಮತ ಚಲಾಯಿಸಲು ಅವಕಾಶ ನೀಡುವ ಕಾನೂನನ್ನು ಜಾರಿಗೆ ತಂದಿದ್ದಾರೆ. ಡೇವಿಡ್ ವುಲ್ಫ್ ಮೀರ್ ಬಾಹ್ಯಾಕಾಶದಲ್ಲಿ ಈ ಅವಕಾಶವನ್ನು ಬಳಸಿಕೊಂಡ ಮೊದಲ ಗಗನಯಾತ್ರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News