ಯುಎಇಗೆ ರಾಯಭಾರಿ ನೇಮಿಸಿದ ತಾಲಿಬಾನ್

Update: 2024-08-22 15:33 GMT

PC : X 

ಕಾಬೂಲ್ : ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ತನ್ನ ಮೊದಲ ಮಾನ್ಯತೆ ಪಡೆದ ರಾಯಭಾರಿಯನ್ನು ನೇಮಿಸಿರುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ.

ಮೌಲಾವಿ ಬದ್ರುದ್ದೀನ್ ಹಕ್ಕಾನಿಯನ್ನು ಯುಎಇಗೆ ಅಫ್ಘಾನಿಸ್ತಾನದ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗಿದ್ದು ಅವರು ತಮ್ಮ ರುಜುವಾತುಗಳನ್ನು ಯುಎಇ ವಿದೇಶಾಂಗ ಸಚಿವಾಲಯದ ಶಿಷ್ಟಾಚಾರ ವ್ಯವಹಾರಗಳ ಸಹಾಯಕ ಅಧೀನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ತಾಲಿಬಾನ್ ಸರಕಾರವನ್ನು ಯಾವುದೇ ದೇಶಗಳು ಮಾನ್ಯ ಮಾಡಿಲ್ಲ. ಆದರೆ ಚೀನಾ ಮಾತ್ರ ರಾಯಭಾರಿಯ ಮಾನ್ಯತೆಯನ್ನು ಔಪಚಾರಿಕವಾಗಿ ದೃಢೀಕರಿಸಿದೆ. ನೆರೆಯ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ತಾಲಿಬಾನ್ ರಾಜತಾಂತ್ರಿಕ ನಿಯೋಗವನ್ನು ಕಳುಹಿಸಿದೆ. ಯುಎಇ ಜತೆ ತಾಲಿಬಾನ್ ಆರ್ಥಿಕ ಸಂಬಂಧಗಳನ್ನು ಹಂಚಿಕೊಂಡಿದ್ದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುವ ಗುತ್ತಿಗೆಯನ್ನು 2022ರಲ್ಲಿ ಯುಎಇ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News