ಕೆಂಪು ಸಮುದ್ರದ ದಾಳಿ ಅಮೆರಿಕಕ್ಕೆ ಭಯ ಹುಟ್ಟಿಸಿದೆ : ಹೌದಿ ಮುಖಂಡರ ಪ್ರತಿಪಾದನೆ

Update: 2024-07-08 15:59 GMT

ಸಾಂದರ್ಭಿಕ ಚಿತ್ರ |  PC : NDTV

 

ಸನಾ: ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಹೊಂದಿರುವ ಅತ್ಯಾಧುನಿಕ ಮಿಲಿಟರಿ ಮತ್ತು ನೌಕಾ ಸಾಮರ್ಥ್ಯಗಳು ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ಗೊಳನ್ನು ಭಯಭೀತಗೊಳಿಸಿದೆ ಎಂದು ಯೆಮನ್ ಮೂಲದ ಹೌದಿ ಗುಂಪಿನ ಮುಖ್ಯಸ್ಥ ಅಬ್ದುಲ್ ಮಲಿಕ್ ಅಲ್-ಹೌದಿ ಪ್ರತಿಪಾದಿಸಿದ್ದಾರೆ.

ಗಾಝಾದಲ್ಲಿ ಕಳೆದ ಅಕ್ಟೋಬರ್ 7ರ ಬಳಿಕ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿ ಹೌದಿಗಳು ಕೆಂಪು ಸಮುದ್ರದಲ್ಲಿ ಇಸ್ರೇಲ್ ಮತ್ತದರ ಮಿತ್ರದೇಶಗಳೊಂದಿಗೆ ಸಂಪರ್ಕವಿರುವ ಹಡಗುಗಳ ಮೇಲೆ ದಾಳಿ ನಡೆಸಲು ಆರಂಭಿಸಿದ ಬಳಿಕ ಹೌದಿಗಳ ಶಕ್ತಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಒಕ್ಕೂಟಕ್ಕೆ ಅರಿವಾಗಿದೆ. ಅವರಲ್ಲಿ ಈಗ ಭೀತಿ ನೆಲೆಸಿದೆ. ಅಮೆರಿಕ ಅತ್ಯಾಧುನಿಕ, ಸುಧಾರಿತ ಮಿಲಿಟರಿ ಸಾಮರ್ಥ್ಯವನ್ನು ಹೊಂದಿದ್ದರೂ ಇಸ್ರೇಲ್ ವಿರುದ್ಧ ಹೌದಿಗಳ ಕಾರ್ಯಾಚರಣೆಯನ್ನು ನಿಲ್ಲಿಸಲು ಯಶಸ್ವಿಯಾಗಿಲ್ಲ. ಯುದ್ಧವಿಮಾನದಿಂದ ಸಜ್ಜುಗೊಂಡಿರುವ ಸಮರನೌಕೆಗಳ ಮೂಲಕ ಇತರ ದೇಶಗಳಲ್ಲಿ ಭಯಹುಟ್ಟಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಭಯದಿಂದಲೇ ಇತರ ದೇಶಗಳು ಸ್ವಯಂ ಸೋಲು ಒಪ್ಪಿಕೊಳ್ಳುವಂತೆ ಮಾಡುವುದು ಅಮೆರಿಕದ ತಂತ್ರಗಾರಿಕೆಯಾಗಿದೆ. ಆದರೆ ಈ ತಂತ್ರವು ಕೆಂಪು ಸಮುದ್ರದಲ್ಲಿ ವಿಫಲವಾಗಿದೆ. ಕೆಂಪು ಸಮುದ್ರದಲ್ಲಿ ಇಸ್ರೇಲ್ ಮತ್ತದರ ಮಿತ್ರರಾಷ್ಟ್ರಗಳ ಮೇಲೆ ನಾವು ನಡೆಸುತ್ತಿರುವ ದಾಳಿಯಿಂದ ಈಗ ಅವರೇ ಭಯಗೊಂಡಿದ್ದಾರೆ ಎಂದವರು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಒಕ್ಕೂಟದ ಪರ ವಹಿಸದಂತೆ ಅವರು ಸೌದಿ ಅರೆಬಿಯಾಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಹೌದಿಗಳ ನಿಯಂತ್ರಣದಲ್ಲಿರುವ ಯೆಮನ್ ರಾಜಧಾನಿ ಸನಾದಿಂದ ತನ್ನ ಬ್ಯಾಂಕ್ಗ ಳನ್ನು ಸ್ಥಳಾಂತರಿಸಿರುವ ಸೌದಿ ಅರೆಬಿಯಾ ಕ್ರಮವನ್ನು ಟೀಕಿಸಿದ ಅಬ್ದುಲ್ ಮಲಿಕ್ `ಹೌದಿಗಳ ಕ್ರಮವು ಯೆಮನ್ನ್ ಜನರನ್ನು ಉಪವಾಸ ಬೀಳಿಸುವ ಮತ್ತು ಆರ್ಥಿಕವಾಗಿ ಹಾನಿಗೊಳಿಸುವ ಉದ್ದೇಶ ಹೊಂದಿದೆ' ಎಂದು ಆರೋಪಿಸಿದ್ದಾರೆ. ಸೌದಿ ಅರೆಬಿಯಾ ಪಾಶ್ಚಿಮಾತ್ಯರ ಪರ ವಹಿಸಿದರೆ ಸೌದಿ ವಿಮಾನ ನಿಲ್ದಾಣಗಳು, ಬ್ಯಾಂಕ್ಗುಳ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ ಎಂದವರು ಎಚ್ಚರಿಕೆ ರವಾನಿಸಿರುವುದಾಗಿ ಇರಾನ್ನ `ಇರ್ನಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಗಾಝಾ ನಗರದಲ್ಲಿರುವ ವಿಶ್ವಸಂಸ್ಥೆಯ ಅಂಗಸಂಸ್ಥೆ `ಯುಎನ್ಆಿರ್ಡಇಬ್ಲ್ಯುಎ' ಕೇಂದ್ರಕಚೇರಿಯನ್ನು ಇಸ್ರೇಲ್ ಸೇನೆಯ ಹತ್ತಕ್ಕೂ ಅಧಿಕ ಸ್ನಿಪ್ಪರ್(ಶಾರ್ಪ್ ಶೂಟರ್ಸ್)ಗಳು ಸುತ್ತುವರಿದಿದ್ದು ಇಸ್ರೇಲ್ ಯೋಧರು ಕಟ್ಟಡದೊಳಗೆ ನುಗ್ಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರದೇಶದಲ್ಲಿ ಸೋಮವಾರ ಇಸ್ರೇಲ್ ಸೇನೆ ಹಿಂಸಾತ್ಮಕ ಕಾರ್ಯಾಚರಣೆ ನಡೆಸುತ್ತಿದ್ದು ಹೊಗೆಬಾಂಬ್ಗೆಳನ್ನು ಎಸೆದು ಮುಂದುವರಿಯುತ್ತಿದೆ. ಗಾಝಾ ನಗರದ ಉತ್ತರ, ಪೂರ್ವ ಮತ್ತು ಮಧ್ಯಭಾಗಗಳಲ್ಲಿ ದಿನವಿಡೀ ಭಾರೀ ಸ್ಫೋಟ ಕೇಳಿಬರುತ್ತಿದೆ. ನೆರೆಹೊರೆಯ ಅಲ್ದರರಾಜ್, ಅಲ್ತುತಫಾ ಮತ್ತು ಶುಜಯಾ ನಗರಗಳ ಬಹುತೇಕ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 40 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇತರ 75 ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು ನೆಲಸಮಗೊಂಡಿರುವ ಕಟ್ಟಡಗಳ ಅವಶೇಷಗಳಡಿ ಸಿಕ್ಕಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಗಾಝಾ ಯುದ್ಧದಲ್ಲಿ 1,86,000 ಜನರ ಮೃತ್ಯು : ವರದಿ

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಸುಮಾರು 1,86,000 ಮಂದಿ ಮೃತಪಟ್ಟಿದ್ದಾರೆ ಎಂದು `ಲ್ಯಾನ್ಸೆಟ್' ವರದಿ ಮಾಡಿದೆ. ಸಂಘರ್ಷದಿಂದ ನೇರ ಸಾವುಗಳು, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳಂತಹ ಕಾರಣಗಳಿಂದ ಆಗುವ ಪರೋಕ್ಷ ಸಾವು ಇದರಲ್ಲಿ ಸೇರಿದೆ ಎಂದು ವರದಿ ಹೇಳಿದೆ. ಲ್ಯಾನ್ಸೆಟ್ ವಿಶ್ವದ ಪ್ರಮುಖ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಒಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News