ಟ್ರಂಪ್ ಪರ ತೀರ್ಪು ನೀಡಿದ ಅಮೆರಿಕದ ಸುಪ್ರೀಂಕೋರ್ಟ್
ವಾಷಿಂಗ್ಟನ್ : ಕ್ಯಾಪಿಟಲ್ ಹಿಲ್ಸ್‍ನಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕೊಲರಾಡೊದಲ್ಲಿ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯಿಂದ ಅನರ್ಹಗೊಳಿಸುವ ನ್ಯಾಯಾಂಗದ ನಿರ್ಧಾರವನ್ನು ಅಮೆರಿಕದ ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಟ್ರಂಪ್‍ಗೆ ಮಹತ್ವದ ಗೆಲುವು ದೊರೆತಂತಾಗಿದೆ.
2021ರ ಜನವರಿ 1ರಂದು ಕ್ಯಾಪಿಟಲ್ ಹಿಲ್ಸ್ ಮೇಲೆ ಬೆಂಬಲಿಗರು ದಾಳಿ ನಡೆಸಲು ಟ್ರಂಪ್ ಪ್ರಚೋದನೆ ನೀಡಿದ್ದರು. ಈ ಗಲಭೆಗೆ ಟ್ರಂಪ್‍ರನ್ನು ಹೊಣೆಯಾಗಿಸಿ ಅವರನ್ನು ಕೊಲರಾಡೊದ ಪ್ರಾಥಮಿಕ ಚುನಾವಣೆಯಿಂದ ಹೊರಗಿಡುವ ನಿರ್ಧಾರವನ್ನು
ಡಿಸೆಂಬರ್ 19ರಂದು ಕೊಲರಾಡೊದ ಉನ್ನತ ನ್ಯಾಯಾಲಯ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಟ್ರಂಪ್ ಸುಪ್ರೀಂಕೋರ್ಟ್‍ನ ಮೊರೆಹೋಗಿದ್ದರು. ಇಲಿನಾಯಿಸ್, ಮೈಯ್ನ್ ಹಾಗೂ ಇತರ ಕೆಲವು ರಾಜ್ಯಗಳೂ ಟ್ರಂಪ್ ವಿರುದ್ಧ ಕ್ರಮ ಕೈಗೊಂಡಿದ್ದರೂ, ಟ್ರಂಪ್‍ರ ಮೇಲ್ಮನವಿಯ ಬಗ್ಗೆ ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಪರಿಶೀಲಿಸಿದ ಬಳಿಕ ಅದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದವು.
ಇದೀಗ ಸುಪ್ರೀಂಕೋರ್ಟ್ ಟ್ರಂಪ್ ಪರವಾಗಿ ಆದೇಶ ನೀಡಿರುವುದರಿಂದ ಮಂಗಳವಾರ ನಡೆಯಲಿರುವ ಪ್ರಮುಖ ಪ್ರಾಥಮಿಕ ಚುನಾವಣೆಗೂ ಮುನ್ನ ಟ್ರಂಪ್‍ಗೆ ಮಹತ್ವದ ಮುನ್ನಡೆ ದೊರಕಿದಂತಾಗಿದೆ.