ಟ್ರಾಫಿಕ್ ಸಿಗ್ನಲ್ ಜಂಪ್: ಅಪಘಾತದಿಂದ ಪಾರಾದ ಲಿಯೋನೆಲ್ ಮೆಸ್ಸಿ
Update: 2023-07-15 16:32 GMT
ವಾಷಿಂಗ್ಟನ್: ಅರ್ಜೆಂಟೀನಾ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಅಪಘಾತದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಯುನೈಟೆಡ್ ಸ್ಟೇಟ್ಸ್‌ನ ಮಿಯಾಮಿಯಲ್ಲಿ ಮೆಸ್ಸಿ ಅವರ ಕಾರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದು, ಭಾರೀ ಅಪಘಾತದಿಂದ ತಪ್ಪಿಸಿಕೊಂಡಿದ್ದಾರೆಂದು ಅರ್ಜೆಂಟೀನಾದ ಟಿವಿ ಚಾನೆಲ್ ಟೈಸಿ ಸ್ಪೋರ್ಟ್ಸ್ ವರದಿ ಮಾಡಿದೆ.
ಮೆಸ್ಸಿ ಪ್ರಯಾಣಿಸುತ್ತಿದ್ದ ಕಾರನ್ನು ಫೋರ್ಟ್ ಲಾಡರ್‌ಡೇಲ್ ಪೊಲೀಸರು ಬೆಂಗಾವಲು ಮಾಡಿರುವ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.