ಚೀನಾ | ಕ್ವಿಂಗೈ ಪ್ರಾಂತದಲ್ಲಿ 5.5 ತೀವ್ರತೆಯ ಭೂಕಂಪನ
Update: 2025-01-08 17:06 GMT
ಬೀಜಿಂಗ್: ಬುಧವಾರ ಮಧ್ಯಾಹ್ನ ಚೀನಾದ ಕ್ವಿಂಗೈ ಪ್ರಾಂತದಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ್ದು ಪ್ರಾಥಮಿಕ ಮಾಹಿತಿಯಂತೆ ಹೆಚ್ಚಿನ ನಾಶ-ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಭೂಕಂಪದ ಕೇಂದ್ರಬಿಂದು ಗೊಲೊಗ್ ಪ್ರದೇಶದ ಮಡೋಯಿ ಕೌಂಟಿಯಲ್ಲಿ 14 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು.
ಉತ್ತರ ಚೀನಾದ ಪ್ರಮುಖ ಜಲಸಂಪನ್ಮೂಲ ಹಳದಿ ನದಿಯ(ಯೆಲ್ಲೋ ರಿವರ್) ಬಳಿ ಭೂಕಂಪ ಕೇಂದ್ರೀಕೃತಗೊಂಡಿತ್ತು ಎಂದು ಚೀನಾ ಭೂಕಂಪ ನೆಟ್‍ವರ್ಕ್ ಕೇಂದ್ರ(ಸಿಇಎನ್‍ಸಿ)ದ ಅಧಿಕಾರಿಗಳು ಹೇಳಿದ್ದಾರೆ. ವಿಶಾಲವಾದ ಕ್ವಿಂಗೈ-ಟಿಬೆಟಿಯನ್ ಪ್ರಸ್ಥಭೂಮಿ ಮಂಗಳವಾರದಿಂದ ಭೂಕಂಪನ ಚಟುವಟಿಕೆಯಿಂದ ತತ್ತರಿಸಿದ್ದು ಟಿಬೆಟ್‍ನ ಹಿಮಾಲಯ ತಪ್ಪಲಿನಲ್ಲಿ 6.8 ತೀವ್ರತೆಯ ಭೂಕಂಪನ ಹಾಗೂ ಸಿಚುವಾನ್‍ನಲ್ಲಿ 3.1 ತೀವ್ರತೆಯ ಭೂಕಂಪನ ಸಂಭವಿಸಿದೆ.