ಬ್ರಿಟನ್ ಸಂಸತ್ತಿನೆದುರು ರೈತರಿಂದ ಟ್ರ್ಯಾಕ್ಟರ್ ಪ್ರತಿಭಟನೆ

Update: 2024-03-26 17:22 GMT

Photo : X/@WallStreetSilv

ಲಂಡನ್, ಮಾ.26: ಸರಕಾರದ ನಿಯಮಗಳು ತಮ್ಮ ಜೀವನೋಪಾಯಕ್ಕೆ ಅಪಾಯ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬ್ರಿಟನ್ನ ರೈತರು ಸಂಸತ್ತಿನ ಎದುರು ಟ್ರ್ಯಾಕ್ಟರ್ ಗಳ ಸಹಿತ ಪ್ರತಿಭಟನೆ ನಡೆಸಿದ್ದಾರೆ.

ಬ್ರೆಕ್ಸಿಟ್ ನಂತರದ ನಿಯಮಗಳು ಮತ್ತು ವ್ಯಾಪಾರ ಒಪ್ಪಂದಗಳು ಜೀವನೋಪಾಯವನ್ನು ಅಪಾಯಕ್ಕೆ ತಳ್ಳುತ್ತಿದೆ ಮತ್ತು ಆಹಾರ ಅಭದ್ರತೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಬ್ರಿಟನ್ನ ಸಂಸತ್ ಕಡೆಗೆ ತಮ್ಮ ಟ್ರ್ಯಾಕ್ಟರ್ಗಳನ್ನು ನಿಧಾನಗತಿಯಲ್ಲಿ ಚಲಾಯಿಸಿದರು. `ಸೇವ್ ಬ್ರಿಟಿಷ್ ಫಾರ್ಮಿಂಗ್' ಹಾಗೂ `ಫೇರ್ನೆಸ್ ಫಾರ್ ಫಾರ್ಮರ್ಸ್' ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಂಟ್ ನಗರದಿಂದ ರೈತರು ಟ್ರ್ಯಾಕ್ಟರ್ ಸಹಿತ ಪಾಲ್ಗೊಂಡಿದ್ದರು. ಸಂಸತ್ಭವನದ ಎದುರಿನ ವೃತ್ತದಲ್ಲಿ ಸೇರಿದ ರೈತರು ಟ್ರ್ಯಾಕ್ಟರ್ಗಳ ಹಾರ್ನ್ ಬಾರಿಸಿ ಆಮದು ಪ್ರಮಾಣ ಕಡಿಮೆಗೊಳಿಸಿ ರೈತರ ಉತ್ಪನ್ನಗಳಿಗೆ ನ್ಯಾಯಯುತ ದರ ನಿಗದಿಗೆ ಆಗ್ರಹಿಸಿ ಘೋಷಣೆ ಕೂಗಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News