ಉಕ್ರೇನ್ ಬೇಹುಗಾರಿಕಾ ಮುಖ್ಯಸ್ಥರ ಪತ್ನಿಗೆ ವಿಷಪ್ರಾಶನ: ವರದಿ

Update: 2023-11-28 16:23 GMT

Photo : NDTV

ಕೀವ್: ಉಕ್ರೇನ್ ಸೇನಾಪಡೆ ಬೇಹುಗಾರಿಕಾ ಮುಖ್ಯಸ್ಥರ ಪತ್ನಿಗೆ ಭಾರಿ ಲೋಹಗಳಿಂದ ವಿಷಪ್ರಾಶನ ಮಾಡಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬೇಹುಗಾರಿಕಾ ಮೂಲಗಳನ್ನು ಉಲ್ಲೇಖಿಸಿ ಮಂಗಳವಾರ ಉಕ್ರೇನ್ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ ಎಂದು ndtv ವರದಿ ಮಾಡಿದೆ.

ರಷ್ಯಾ ವಿರುದ್ಧ 21 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿನ ಗೌಪ್ಯ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಭಾಗಿಯಾಗಿರುವ ಉಕ್ರೇನ್ ಸೇನಾಪಡೆ ಬೇಹುಗಾರಿಕಾ ಸಂಸ್ಥೆಯಾದ ಗುರ್ ನ ಮುಖ್ಯಸ್ಥ ಕಿರಿಲೊ ಬುಡನೋವ್ ಅವರ ಪತ್ನಿ ಮರಿಯಾನಾ ಬುಡನೋವಾ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂದು ಹೇಳಲಾಗಿದೆ.

ರಷ್ಯಾ ವಿರುದ್ಧ ಪ್ರತಿ ದಾಳಿ ಸಂಘಟಿಸುವಲ್ಲಿನ ಸೂತ್ರಧಾರನಾಗಿ ಉಕ್ರೇನ್ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿರುವ ಬುಡನೋವ್, ರಷ್ಯಾ ಮಾಧ್ಯಮಗಳಲ್ಲಿ ದ್ವೇಷಸಲ್ಪಡುತ್ತಿರುವ ಶತ್ರುವಾಗಿ ಹೊರಹೊಮ್ಮಿದ್ದಾರೆ.

ಒಂದು ವೇಳೆ ಇದು ಉದ್ದೇಶಪೂರ್ವಕ ವಿಷಪ್ರಾಶನ ಎಂಬುದು ದೃಢಪಟ್ಟರೆ, ಕಳೆದ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ರಷ್ಯಾದಿಂದ ಉನ್ನತ ಮಟ್ಟದ ಉಕ್ರೇನ್ ನಾಯಕತ್ವದ ಮುಖಗಳ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದಿರುವ ಅತ್ಯಂತ ಗಂಭೀರ ಹತ್ಯಾ ಪ್ರಯತ್ನ ಇದಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಲು ಉಕ್ರೇನ್ ಸೇನಾಪಡೆ ಬೇಹುಗಾರಿಕಾ ಸಂಸ್ಥೆ ಹಾಗೂ ದೇಶೀಯ ಭದ್ರತಾ ಸೇವೆಗಳು ನಿರಾಕರಿಸಿವೆ.

ಈ ವಿಷಪ್ರಾಶನ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಅಥವಾ ಈ ಘಟನೆ ಯಾವಾಗ ನಡೆಯಿತು ಎಂಬುದನ್ನು ಈವರೆಗಿನ ವರದಿಗಳು ಸ್ಪಷ್ಟಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News