ನೆದರ್ ಲ್ಯಾಂಡ್ ನಲ್ಲಿ ಹಿಂಸಾಚಾರ : ಪೊಲೀಸ್ ವ್ಯಾನ್‍ಗೆ ಬೆಂಕಿ; 4 ಪೊಲೀಸರಿಗೆ ಗಾಯ

Update: 2024-02-18 16:45 GMT

Photo: indiatoday.in

ಹೇಗ್ : ನೆದರ್ ಲ್ಯಾಂಡ್ ರಾಜಧಾನಿ ಹೇಗ್‍ನಲ್ಲಿ ಎರಿಟ್ರಿಯಾ ಸರಕಾರದ ಪರ ಮತ್ತು ವಿರೋಧಿ ತಂಡಗಳ ನಡುವೆ ನಡೆದ ಘರ್ಷಣೆ ಹಾಗೂ ಆ ಬಳಿಕದ ಹಿಂಸಾಚಾರದಲ್ಲಿ ಹಲವು ಪೊಲೀಸ್ ವಾಹನಗಳಿಗೆ ಬೆಂಕಿಹಚ್ಚಲಾಗಿದೆ. ಕಲ್ಲು ತೂರಾಟದಲ್ಲಿ ಕನಿಷ್ಠ 4 ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪೂರ್ವ ಆಫ್ರಿಕಾದ ಎರಿಟ್ರಿಯಾ ದೇಶದಲ್ಲಿ ಆಂತರಿಕ ಕಲಹ ಉಲ್ಬಣಿಸಿದ್ದು ಸುಮಾರು 25,000 ಎರಿಟ್ರಿಯಾ ಪ್ರಜೆಗಳು ನೆದರ್ ಲ್ಯಾಂಡ್ ನಲ್ಲಿದ್ದಾರೆ. ಹೇಗ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎರಿಟ್ರಿಯಾ ಸರಕಾರದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಆರಂಭಗೊಂಡ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ದಾಂಧಲೆ ನಡೆಸಿದ ಎರಡೂ ತಂಡಗಳು ಸಿಕ್ಕಸಿಕ್ಕವರ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿದ್ದಾರೆ. ಕೆಲವರ ಕೈಯಲ್ಲಿ ಮಾರಕಾಯುಧಗಳಿದ್ದವು. ಗಲಭೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಕಲ್ಲು, ಇಟ್ಟಿಗೆ ಎಸೆಯಲಾಗಿದ್ದು ಎರಡು ಪೊಲೀಸ್ ವಾಹನಗಳಿಗೆ ಮತ್ತು ಪ್ರವಾಸಿಗರ ಬಸ್‍ಗೆ ಬೆಂಕಿ ಹಚ್ಚಲಾಗಿದೆ. ದಾಂಧಲೆ ನಡೆಸುತ್ತಿದ್ದವರು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದು ನಾಲ್ಕು ಪೊಲೀಸರು ಗಾಯಗೊಂಡಿದ್ದಾರೆ. ಹಲವರನ್ನು ಬಂಧಿಸಲಾಗಿದ್ದು ಗಲಭೆ ನಿಯಂತ್ರಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮ್ಯರಿಯೆಲ್ ವಾನ್‍ವುಲ್ಪೆನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News