ವಿರೋಧ ಪಕ್ಷಗಳ ಮೈತ್ರಿಕೂಟ I.N.D.I.A ಹೆಸರಿಗೆ 'ಜೀತೇಗ ಭಾರತ್' ಅಡಿಬರಹ

Update: 2023-07-19 06:40 GMT

ಹೊಸದಿಲ್ಲಿ: 26 ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ I.N.D.I.A ಹೆಸರನ್ನು ಆಯ್ಕೆ ಮಾಡಿದ ಒಂದು ದಿನದ ನಂತರ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಗುರಿಯನ್ನು ಹೊಂದಿರುವ ಒಕ್ಕೂಟದ ಟ್ಯಾಗ್ ಲೈನ್ ಆಗಿ ಜೀತೇಗ ಭಾರತ್ (ಭಾರತ ಗೆಲ್ಲುತ್ತದೆ) ಎಂದು ಅಂತಿಮಗೊಳಿಸಲಾಗಿದೆ.

ನಿನ್ನೆ ತಡರಾತ್ರಿ ನಡೆದ ವಿವರವಾದ ಸಮಾಲೋಚನೆಯ ನಂತರ ಟ್ಯಾಗ್ ಲೈನ್ ನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ , ಶಿವಸೇನೆಯ ಮುಖ್ಯಸ್ಥ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಉದ್ದವ್ ಠಾಕ್ರೆ ವಿರೋಧ ಪಕ್ಷದ ಮೈತ್ರಿಗೆ ಹಿಂದಿ ಅಡಿಬರಹ ಇರಬೇಕು ಎಂದು ಸಲಹೆ ನೀಡಿದ್ದರು.

ಮಂಗಳವಾರ ಕೊನೆಗೊಂಡ ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷದ ಎರಡು ದಿನಗಳ ಸಮಾವೇಶದಲ್ಲಿ I.N.D.I.A - ಇಂಡಿಯನ್ ನ್ಯಾಶನಲ್ ಡೆವಲಪ್ ಮೆಂಟಲ್ ಇನ್ಕ್ಲೂಸಿವ್ ಅಲೈಯನ್ಸ್ ಎಂಬ ಹೆಸರನ್ನು ಅಂತಿಮಗೊಳಿಸಲಾಯಿತು.

2024ರ ಲೋಕಸಭೆ ಚುನಾವಣೆ ಮೋದಿ ವರ್ಸಸ್ I.N.D.I.A.ಯುದ್ಧವಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"NDA ಮತ್ತು I.N.D.I.A, ನರೇಂದ್ರ ಮೋದಿ ಮತ್ತು I.N.D.I.A , ಅವರ ಸಿದ್ಧಾಂತ ಮತ್ತು I.N.D.I.A. ಮಧ್ಯೆ ಹೋರಾಟ ನಡೆಯಲಿದ್ದು, ಭಾರತ ಯಾವಾಗಲೂ ಎಲ್ಲಾ ಹೋರಾಟಗಳನ್ನು ಗೆಲ್ಲುತ್ತದೆ" ಎಂದು ರಾಹುಲ್ ಗಾಂಧಿ ಹೇಳಿದರು.

" ಜಿತೇಗ ಭಾರತ್" ಎಂಬ ಅಡಿಬರಹವನ್ನು ರಚಿಸುವ ಪ್ರತಿಪಕ್ಷದ ಹೆಜ್ಜೆಯು ಬಿಜೆಪಿಯ "ಭಾರತ್ ವರ್ಸಸ್ ಇಂಡಿಯಾ" ದಾಳಿಯನ್ನು ಕ್ಷೀಣಗೊಳಿಸುವ ಪ್ರಯತ್ನವಾಗಿದೆ ಎಂದು ನಂಬಲಾಗಿದೆ.

ಬೆಂಗಳೂರಿನಲ್ಲಿ ಪ್ರತಿಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಇಳಿದಾಗ, ಬಿಜೆಪಿ 39 ಪಕ್ಷಗಳ ಪ್ರತಿನಿಧಿಗಳೊಂದಿಗೆ ದಿಲ್ಲಿಯಲ್ಲಿ ಸಭೆ ನಡೆಸಿತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News