ಮಾವೋವಾದಿಗಳ ನಂಟು | ಪಶ್ಚಿಮ ಬಂಗಾಳದ 12 ಕಡೆಗಳಲ್ಲಿ ಎನ್‌ಐಎ ದಾಳಿ

Update: 2024-10-01 15:28 GMT

ಸಾಂದರ್ಭಿಕ ಚಿತ್ರ | PC : PTI 

ಕೋಲ್ಕತಾ : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಅಧಿಕಾರಿಗಳು ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿರುವ ವ್ಯಕ್ತಿಗಳಿಗೆ ಸೇರಿದ 12 ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ.

ಕೋಲ್ಕತಾದ ಒಂದು ಸ್ಥಳ, ನೇತಾಜಿ ನಗರ, ಪಾನಿಹಾಟಿ, ಬರಾಕ್‌ಪೋರ, ಸೋದೆಪುರ, ಅಸನ್ಸೋಲ್ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧೆಡೆಗಳಲ್ಲಿ ಎನ್‌ಐಎ ದಾಳಿಗಳನ್ನು ನಡೆಸಿದೆ. ಇಬ್ಬರು ಮಹಿಳೆಯರು ಮತ್ತು ಅವರ ಸಹವರ್ತಿಗಳು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಈ ದಾಳಿಗಳು ಸಂಬಂಧಿಸಿವೆ.

ಪೂರ್ವ ಭಾರತದಲ್ಲಿ ಮಾವೋವಾದಿ ಜಾಲಗಳನ್ನು ವಿಸ್ತರಿಸಲು ಈ ಮಹಿಳೆಯರು ಹಣವನ್ನು ಸ್ವೀಕರಿಸುತ್ತಿದ್ದರು ಎನ್ನಲಾಗಿದೆ. ಮಾವೋವಾದಿ ಸಂಘಟನೆಯಲ್ಲಿ ಅವರ ನಿಖರ ಪಾತ್ರಗಳನ್ನು ತಿಳಿದುಕೊಳ್ಳಲು ದಾಳಿಗಳನ್ನು ನಡೆಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ದಾಳಿಗಳ ಸಂದರ್ಭ ಹಲವಾರು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News