ಎ.6ರಂದು ಅಫಜಲ್ಪುರದಲ್ಲಿ ಆದಿ ಬಣಜಿಗ ಸಮಾಜದ ಜನ ಜಾಗೃತಿ ಸಮಾವೇಶ : ಜಗನ್ನಾಥ್ ಶೇಗಜಿ

ಕಲಬುರಗಿ : ಸಮುದಾಯ ಸಂಘಟನೆ ಹಾಗೂ ಜಾಗೃತಿ ನಿಟ್ಟಿನಲ್ಲಿ ಎ.6ರಂದು ಬೆಳಗ್ಗೆ 11 ಕ್ಕೆ ಅಫಜಲ್ಪುರ ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲ್‌ನಲ್ಲಿ ಆದಿ ಬಣಜಿಗ ಸಮಾಜದ ಜನ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಾಜದ ಮುಖಂಡ ಜಗನ್ನಾಥ್ ಶೇಗಜಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಆದಿ ಬಣಜಿಗ ಸಮಾಜವನ್ನು ಪ್ರವರ್ಗ 3 ಎ ಗೆ ಸೇರಿಸುವ ಜೊತೆಗೆ ಪ್ರಮುಖವಾಗಿ ಆದಿ ಬಣಜಿಗ ಸಮಾಜ ಗೆಜೆಟ್ ನಲ್ಲಿ ಸೇರ್ಪಡೆ ಮಾಡುವ ಏಕೈಕ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ ಎಂದರು.
ಬೀದರ್ ಸಿದ್ದಾರೂಢ ಮಠದ ಶಿವಕುಮಾರ ಮಹಾಸ್ವಾಮಿಗಳು, ಕುಷ್ಟಗಿ ತಾಲೂಕಿನ ಬಿಜಕಲ್ ವಿರಕ್ತ ಮಠದ ಶಿವಲಿಂಗ ಮಹಾಸ್ವಾಮಿಗಳು, ಶಿವಮೊಗ್ಗ ಜಿಲ್ಲೆಯ ಹಾರನಳ್ಳಿ ವಿರಕ್ತಮಠದ ನೀಲಕಂಠ ಮಹಾಸ್ವಾಮಿಗಳು, ಅಫಜಲ್ಪುರ ಮಳೇಂದ್ರ ಸಂಸ್ಥಾನ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಬಡದಾಳ ತೇರಿನ ಮಠದ ಡಾ.ಚೆನ್ನಮಲ್ಲ ಶಿವಾಚಾರ್ಯರು, ಚಿಣಮಗೇರಾದ ಸಿದ್ಧರಾಮ ಶಿವಾಚಾರ್ಯರು, ಹಿರೇಜೇವರ್ಗಿಯ ಜಯ ಗುರುಶಾಂತಲಿಂಗ ಶಿವಾಚಾರ್ಯರು, ಗೋರಚಿಂಚೋಳಿಯ ಸಿದ್ಧರಾಮೇಶ್ವರ ಪಟ್ಟದೇವರು ಶ್ರೀಗಳವರು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸುವರು, ಮಾಜಿ ಸಚಿವೆ ಶಶಿಕಲಾ ಅಣ್ಣಾಸಾಬ ಜೊಲ್ಲೆ ಶರಣ ಆದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಇಂಡಿ ಕ್ಷೇತ್ರದ ಶಾಸಕ ಯಶ್ವಂತರಾಯಗೌಡ ಪಾಟೀಲ್ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಸಮಾಜದ ಮುಖಂಡರಾದ ರಾಜೇಂದ್ರ ಪಾಟೀಲ್ ರೇವೂರ ಮೆರವಣಿಗೆಗೆ ಚಾಲನೆ ನೀಡುವರು. ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಶರಣ ಆದಯ್ಯನವರ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಹಾಟ ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಸಸಿಗೆ ನೀರು ಹಾಕುವರು. ಖ್ಯಾತ ಉದ್ದಿಮೆದಾರ ಸಂಜೀವಕುಮಾರ ನಿಂಬಾಳಕರ್ ನೇತೃತ್ವ ವಹಿಸಿದರೆ, ಆದಿ ಬಣಜಿಗ ಸಮಾಜದ ಅಫಜಲಪುರ ತಾಲೂಕಿನ ಅಧ್ಯಕ್ಷರಾದ ಅಂಬಣ್ಣ ಕುದರಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಆದಿ ಬಣಜಿಗ ಸಮಾಜದ ಹಿರಿಯ ಐಪಿಎಸ್ ಅಧಿಕಾರಿ ಹಣಮಂತರಾಯ ಹೊಸಪೇಟೆ, ಹಿರಿಯ ಕವಿ ರಮಾನಂದ ಪಾಟೀಲ್ ಹಿರೇಜೇವರ್ಗಿ, ವಾಣಿಜ್ಯ ಇಲಾಖೆಯ ಸಹಾಯಕ ಆಯುಕ್ತ ಪ್ರಭಾಕರ ಪಾಟೀಲ್, ಹಿರಿಯ ಕೆಎಎಸ್ ಅಧಿಕಾರಿ ಪ್ರಕಾಶ ಕುದರಿ, ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಖ್ಯಾತ ವೈದ್ಯರಾದ ಡಾ.ಈರಣ್ಣ ಹೀರಾಪುರ, ಪಿಎಸ್‌ಐಗಳಾದ ಮಹಾಂತೇಶ ಪಾಟೀಲ್, ವಾತ್ಸಲ್ಯ, ವೈಶಾಲಿ ಕಾಮಶೆಟ್ಟಿ, ಜೈಲಾಧಿಕಾರಿ ಸುನಂದಾ ರೇವೂರ, ನಿವೃತ್ತ ಅಧಿಕಾರಿಗಳಾದ ಅಣ್ಣಪ್ಪ ಕುದರಿ, ಗುಂಡೇರಾವ ಉಡಗಿ ಸೇರಿದಂತೆ ಇತರರನ್ನು ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ರೇವೂರ್, ಕಲ್ಯಾಣರಾವ ಬಿರಾದರ್, ಮಲ್ಲಿನಾಥ ಶೇಗಜಿ, ಅಂಬಣ್ಣ ಕುದರಿ, ಶಿವಾನಂದ ಅಂಕಲಗಿ, ಶರಣು ಭಂಗೋಳಿ, ಬಸವಣ್ಣೆಪ್ಪ ಪಾಟೀಲ್, ಕಲ್ಯಾಣರಾವ ನಾಗೋಜಿ ಮತ್ತಿತರರು ಇದ್ದರು.