ಆಳಂದ | ಗಡಿನಾಡಿನ ಶ್ರಮಿಕ ಕನ್ನಡಿಗರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆ : ಶಾಸಕ ಬಿ.ಆರ್.ಪಾಟೀಲ್

Update: 2024-11-25 15:19 GMT

ಕಲಬುರಗಿ : ಮಹಾರಾಷ್ಟ್ರದ ಗಡಿಗೆ ಹೊಂದಿಕೊoಡಿರುವ ಆಳಂದ ತಾಲ್ಲೂಕು ಮರಾಠಿ ಹಾಗೂ ಉರ್ದು, ಮೋಡಿ ಭಾಷೆಯ ಪ್ರಭಾವದಿಂದ ಕನ್ನಡ ಕಲಿಯುವ ವಾತಾವರಣ ಕಡಿಮೆ ಇರುವುದನ್ನು ಮನಗಂಡು 1980ರಲ್ಲಿ ಖಾಸಗಿ ಕನ್ನಡ ಶಾಲೆಯನ್ನು ಸ್ಥಾಪಿಸಲಾಯಿತು. ಜತೆಗೆ ಸರಕಾರಿ ಶಾಲೆಗಳಲ್ಲಿಯೂ ಕನ್ನಡ ಅಭ್ಯಾಸ ಮಾಡುವಂತಾಗಿರುವದರಿoದಲೇ ಅನೇಕರು ಶಾಲೆ ಕಲಿತು ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ. ಗಡಿನಾಡಿನ ಶ್ರಮಿಕ ಕನ್ನಡಿಗರ ಸಾಧನೆ ಯುವ ಸಮೂಹಕ್ಕೆ ಪ್ರೇರಣೆಯಾಗಲಿ ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಲೋಕ ನಾಯಕ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಸೋಮವಾರ ಸಮತಾ ಲೋಕ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 47 ಜನರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯು ಶ್ರೀಮಂತವಾಗಿದ್ದು ಇದು ಅನ್ನದ ಭಾಷೆಯಾಗಿದೆ. ಕನ್ನಡ ಭಾಷೆ ಇದು ಬದುಕಿನ ಭಾಷೆ, ವ್ಯಾಪಾರ ವ್ಯವಹಾರ, ಆಡಳಿತ ಕನ್ನಡದಲ್ಲಿ ಇರಲಿ, ಬೇರೆ ಭಾಷೆಯ ಬಗ್ಗೆ ಗೌರವ ಇರಲಿ ಎಂದರು.

ಕಳೆದ 43 ವರ್ಷಗಳಿಂದಲೂ ವಿಶಿಷ್ಟ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಪ್ರಗತಿ ಸಾಧಿಸಿ ಮುಂದೆ ಬರುವಂತೆ ಕರೆ ನೀಡಿದರು.

ಕಲಬುರಗಿ ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಫಲದಿಂದಲೇ ಕರ್ನಾಟಕ ನಾಮಕರಣವಾಗಲು ಸಾಧ್ಯವಾಗಿದೆ. ಮುತ್ಸದ್ದಿ ರಾಜಕಾರಣಿ, ಶಾಸಕ ಬಿ.ಆರ್.ಪಾಟೀಲ್ ಅವರು ಹೋರಾಟ, ಚಳುವಳಿ ಮೂಲಕ ಜನಪರ ಆಡಳಿತ ನೀಡುವ ಜತೆಗೆ ಗಡಿಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿದ್ದು ಸಮಾಜಮುಖಿ ಕಾರ್ಯಗಳು ನಾಡಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ನಿರ್ದೇಶಕ ಸೂರ್ಯಕಾಂತ ಗುಡ್ಡಡಗಿ, ಕಸಾಪ ಮಾಜಿ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ, ಶಿಕ್ಷಣ ಪ್ರೇಮಿ ಕಲ್ಯಾಣರಾವ್ ಪಾಟೀಲ್, ಗುರುಲಿಂಗಪ್ಪ ಪಾಟೀಲ್, ಪ್ರಚಾರ್ಯ ಡಾ.ಮಂಜುನಾಥ ಅಕ್ಕಿ, ಸುರೇಂದ್ರ ಪಾಟೀಲ್, ನಾಗಣ್ಣಾ ಸಲಗರೆ, ಶಿವಕುಮಾರ ದಾನಾಯಿ, ವೈಜನಾಥ ಜಿಡಗೆ, ಮುಖ್ಯಗುರು ಗಂಗಾoಬಿಕಾ ಮಂಟಗಿ, ಶಿವಪುತ್ರಪ್ಪ ಅಲ್ದಿ, ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ, ಸಂಜಯ ಪಾಟೀಲ್, ಗುರುಲಿಂಗಯ್ಯ ಅಳ್ಳೋಳಿಮಠ, ಮಾಣಿಕ ಕಾಳಜೆ, ಸತೀಶ ಕೋಗನೂರೆ ಮತ್ತಿತರರು ಇದ್ದರು.

47 ಸಾಧಕರಿಗೆ ಪ್ರಶಸ್ತಿ ಸನ್ಮಾನ :

ನಿರ್ಮಲಾ ಶಿವರಾಮ ಬಳಿಗಾರ, ಸಿದ್ದರಾಮ ಕೋರೆ, ಗುರುಶಾಂತಪ್ಪ ಪಾಟೀಲ್, ರವಿ ಪಾಟೀಲ್ (ಕೃಷಿ), ಸುನೀತಾ ಮುಲಗೆ, ಪೂಜಾ ಹತ್ತೆ, ಜಲಜಾಕ್ಷಿ ಕೋರೆ, ಅವಿನಾಶ ಕೋರೆ, ಬಸವರಾಜ ಕೋರಳ್ಳಿ (ಸಂಶೋಧನೆ), ಶಾಂತಯ್ಯ ಸ್ವಾಮಿ, ಇಶಾಕ್ ಅಲಿ ಮುಜಾವರ, ದತ್ತಪ್ಪ ಗಾಯಕವಾಡ, ಗುರುಲಿಂಗಯ್ಯ ಸ್ವಾಮಿ(ಸಮಾಜ ಸೇವೆ), ಬದ್ರನಾಥ ಮುಡಬಿ, ಉತ್ತಮ ಕಾಂಬಳೆ, ಮಹಾಂತೇಶ ಫುಲಾರೆ, ಬಸವರಾಜ ಕಾಮಾಜಿ, ಸಂತ್ರಾನ ಗುಮಟೆ (ಕಲೆ), ಲಕ್ಷö್ಮಣ ಝಳಕಿ, ಲತಾಬಾಯಿ ಜ್ಯೋಶಿ (ಶಿಕ್ಷಣ), ಚಂದ್ರಕಾAತ ಯಳಮೇಲಿ ( ಸೈನಿಕ),ಮೋಸಿನ್ ಸಗರಿ, ಸುಧಾಕರ ಧುತ್ತರಗಿ, ಕರ್ಣ ಬಿರಾದಾರ (ಕ್ರೀಡೆ), ಡಾ.ಯಲ್ಲಪ್ಪ ಇಂಗಳೆ (ಆರೋಗ್ಯ), ವೀರಭದ್ರಯ್ಯ ಸ್ವಾಮಿ (ಪರಿಸರ ಸಂರಕ್ಷಣೆ), ಎಚ್.ಬಿ.ತೀರ್ಥೆ,ಮಹಾದೇವಪ್ಪ ಪೂಜಾರಿ, ಶಂಕರ ಹೂಗಾರ (ವಿಶೇಷ ಸಾಧನೆ), ಕವಿತಾ ಸುರವಸೆ, ಜಯಶ್ರೀ ಐರೋಡಗಿ, ಲಕ್ಷ್ಮಣ ಜಾಧವ (ಹೈನುಗಾರಿಕೆ), ಶ್ರೀದೇವಿ ಚಟ್ಟಿ (ಅಂಗನವಾಡಿ), ಶಾಂತಾಬಾಯಿ ಹರಳಯ್ಯ (ಆಶಾ ಕಾರ್ಯಕರ್ತೆ), ನಿಂಬೆಣ್ಣಾ ಬಿರಾದಾರ, ಶಿವಕುಮಾರ ಕಲ್ಯಾಣಿ, ಮಹಾದೇವ ಪರಮೇಶ್ವರ, ಗುರುಶಾಂತ ಭರಮಲಿಂಗ, ಶೀಫಾ ನದಾಫ್, ಅಕ್ಷತಾ ಧಾಬಾ, ಸುಷ್ಮೀತಾ ಬೋಸ್ಲೆ, ಆದಿತ್ಯ ಜಗದಾಳೆ, ಅಷ್ಮೀತಾ ಏಟೆ, ಸುಪ್ರಿಯಾ ಆಲೂರೆ(ಶಿಕ್ಷಣ ಹೆಚ್ಚು ಅಂಕ ಪಡೆದವರು) ಅವರಿಗೆ ಸನ್ಮಾನಿಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News