ಕಲಬುರಗಿ | 1 ರಿಂದ 10ನೇ ತರಗತಿವರೆಗೆ ಪ್ರವೇಶ ಪಡೆಯಲು ಅರ್ಹ ಅಂಧ ಬಾಲಕರಿಂದ ಅರ್ಜಿ ಆಹ್ವಾನ
Update: 2025-04-03 18:31 IST

ಕಲಬುರಗಿ : ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ನಗರದಲ್ಲಿ ಸರ್ಕಾರಿ ಅಂಧ ಬಾಲಕರ ಪ್ರೌಢ ಶಾಲೆಯಲ್ಲಿ 2025-26ನೇ ಸಾಲಿಗೆ 1 ರಿಂದ 10ನೇ ತರಗತಿವರೆಗೆ ಪ್ರವೇಶ ಪಡೆಯಲು 6 ರಿಂದ 18 ವರ್ಷದೊಳಗಿನ ಅರ್ಹ ಅಂಧ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ.
ಅಂಧ ಬಾಲಕರಿಗೆ ಶಿಕ್ಷಣ, ಸಂಗೀತ, ಕಂಪ್ಯೂಟರ್, ಇತ್ಯಾದಿ ತರಬೇತಿ ಜೊತೆಗೆ ಮಕ್ಕಳಿಗೆ ಉಚಿತ ವಸತಿ, ಊಟ ಮತ್ತು ಸಮವಸ್ತ್ರ ಒದಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸ್ಮಿತಾ-9986594149, ಸಂಗಮ್ಮ-8792259776, ಜಯಶ್ರೀ-9591037444, ಮಹ್ಮದ ಖಾಜಾ-9611221259, ಘಾಳೇಪ್ಪ-8088224622, ಶ್ರೀಕಾಂತ-9972620297, ಪ್ರಕಾಶ ಭಜಂತ್ರಿ-9686363287, ಜಗದೀಶ್ ನಾಯ್ಕ್-8088893731 ಹಾಗೂ ಶಾಂತಪ್ಪ ಇವರ ಮೊಬೈಲ್ ಸಂಖ್ಯೆಗೆ 9632028955 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.