ಕಲಬುರಗಿ | ಎ.14ರಂದು 'ಮೊವ್' ದಲ್ಲಿ ಡಾ.ಅಂಬೇಡ್ಕರ್ ಜಯಂತ್ಯೋತ್ಸವ ಆಚರಣೆ : ವೈಜನಾಥ ಎಸ್.

Update: 2025-04-09 15:46 IST
Photo of Press meet
  • whatsapp icon

ಕಲಬುರಗಿ : ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವನ್ನು ಎ.14ರಂದು ಅಂಬೇಡ್ಕರವರ ಜನ್ಮ ಭೂಮಿಯಾಗಿರುವ ಮಧ್ಯಪ್ರದೇಶದ ಇಂಧೋರ ಜಿಲ್ಲೆಯ ಮೊವ್ ದ ಅಂಬೇಡ್ಕರ್ ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ರಾಷ್ಟ್ರೀಯ ವಕ್ತಾರ ವೈಜನಾಥ ಎಸ್. ಝಳಕಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.11 ರಂದು ಆಳಂದ ತಾಲೂಕಿನ ಲಾಡ ಚಿಂಚೋಳಿ ಹತ್ತಿರ ಇರುವ ಭಾರತ ಮಾತಾ ದೇವಸ್ಥಾನದಿಂದ ಹವಾ ಮಲ್ಲಿನಾಥರ ನೇತ್ರತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಮಧ್ಯಪ್ರದೇಶದಲ್ಲಿರುವ ಬಾಬಾ ಸಾಹೇಬರ ಜನ್ಮಸ್ಥಳ ಮೊವ್ ಗೆ ( ಸೋಲಾಪುರ, ಬಿಗವಾನ, ದೌಂಡ್, ಸಾಂಭಾಜಿನಗರ, ಧುಳೆ, ಇಂಧೋರ ಮಾರ್ಗವಾಗಿ) ತೆರಳಿ ಎ.14 ರಂದು ಬೆಳಿಗ್ಗೆ 11 ಗಂಟೆಗೆ ಮೊವ್ ದ ಅಂಬೇಡ್ಕರ್ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಆಚರಿಸುವರು ಎಂದರು.

ಜಯಂತ್ಯೋತ್ಸವ ಕಾರ್ಯಕ್ರಮಲ್ಲಿ ಅನೇಕ ಖ್ಯಾತ ವಾಗ್ಮಿಗಳು ಡಾ.ಬಿ.ಆರ್.ಅಂಬೇಡ್ಕರವರ ಜೀವನದ ಸಾಧನೆಗಳ ಕುರಿತು ಮಾತನಾಡಲಿದ್ದಾರೆ, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು ಎಂಬ ಮಾಹಿತಿ ನೀಡಿರುವ ಅವರು, ಈ ದೇಶಭಕ್ತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂದೇಶ ಪವಾರ, ಭೂಮಿಕಾ ಚಿತ್ತಾಪೂರ, ಮಂಜುನಾಥ ಬಿರಾದಾರ, ಮಲ್ಲಿಕಾರ್ಜುನ ಸಾರವಾಡ, ಸೈಯದ್ ರವುಪ್ ಖಾದ್ರಿ, ಉಮೇಶ್, ದತ್ತು ಹಯ್ಯಾಳಕರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News