ಕಲಬುರಗಿ | ವಕ್ಫ್ ತಿದ್ದುಪಡಿ ಮಸೂದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

Update: 2025-04-09 15:28 IST
ಕಲಬುರಗಿ | ವಕ್ಫ್ ತಿದ್ದುಪಡಿ ಮಸೂದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
  • whatsapp icon

ಕಲಬುರಗಿ: ದೇಶದಲ್ಲಿ ಜಾರಿಗೆ ತರುತ್ತಿರುವ ಅಸಂವಿಧಾನ ವಕ್ಫ್ ತಿದ್ದುಪಡಿ ವಿಧೇಯಕ ರದ್ದು ಪಡೆಸಬೇಕೆಂದು ಆಗ್ರಹಿಸಿ ಜನತಾ ಪರಿವಾರ ಸಂಘಟನೆ ನೇತೃತ್ವದಲ್ಲಿ ಮೂಲನಿವಾಸಿ, ನಾಜ್ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಬುಧವಾರ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಮಹಿಳೆಯರಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ಬಿಜೆಪಿ ಕಳೇದ 11 ವರ್ಷಗಳಿಂದ ಮುಸ್ಲಿಮ್ ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮಾಡುತ್ತ ಬಂದಿದೆ. ಅಲ್ಪಸಂಖ್ಯಾತರ ವಿರೋಧಿ ಧೋರಣೆ ಹೊಂದಿರುವ ಕೇಂದ್ರ ಸರಕಾರ ವಕ್ಫ್ ತಿದ್ದುಪಡೆ ಮಸೂದೆ ಮೂಲಕ ಅಲ್ಲಾಹಗೆ ಸೇರಿದ ಆಸ್ತಿಯನ್ನು ಒತ್ತುವರಿ ಮಾಡುವ ಸಂಚು ಹೊಂದಿದೆ ಎಂದು ಜನತಾ ಪರಿವಾರ ಸಂಘಟನೆಯ ಜಿಲ್ಲಾ ಮುಖಂಡ ಸಿರಾಜ್ ಶಾಬ್ದಿ ಅವರು ಆರೋಪಿಸಿದ್ದಾರೆ.

ಸುಪ್ರೀo ಕೋರ್ಟ್ ಬಾಬರಿ ಮಸೀದಿ ತೀರ್ಪಿನಲ್ಲಿ ಧಾರ್ಮಿಕ ನಂಬಿಕೆ ಆಧಾರದಲ್ಲಿ ಆದೇಶ ನೀಡಿದೆ. ಆದರೆ ಇದೀಗ ಕೇಂದ್ರ ಮತ್ತು ಸುಪ್ರೀo ಕೋರ್ಟ್ ಮುಂದಿದೆ, ವಿವಾದಿತ ಮತ್ತು ಅಸಂವಿಧಾನ ವಕ್ಫ್ ತಿದ್ದುಪಡಿ ಕಾಯ್ದೆ ಉಭಯ ಸದನಗಳಲ್ಲಿ ರಾತ್ರೋ ರಾತ್ರಿ ಅಂಗೀಕರಿಸಿಕೊಂಡು ದೇಶದಲ್ಲಿ ಅಸಂವಿಧಾನ ಮಸೂದೆಯನ್ನು ದೇಶದಲ್ಲಿ ಜಾರಿ ಮಾಡಿ ಶಾಂತಿಯನ್ನು ಹಾಳು ಮಾಡಲು ಮುಂದಾಗಿರುವುದು ಜನರ ಆಕ್ರೋಶ ಕಾರಣವಾಗಿದೆ ಎಂದರು.

ಮೂಲನಿವಾಸಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಹೊಸಮನಿ, ನಾಜ್ ವೆಲ್ಫೇರ್ ಸೂಸೈಟಿಯ ಅಧ್ಯಕ್ಷರಾದ ನಾಜ್, ಜನತಾ ಪರಿವಾರ ಸಂಘಟನೆ ಕಾರ್ಯದರ್ಶಿ ಶೇಕ್ ಸೈಫನ್, ಮೌಲಾನಾ ರೀಜ್ವಿ, ಖಾಲಿದ್ ಅಬರಾರ್, ನಜೀರ್ ಅಹ್ಮದ್, ಮುಬೀನ್ ಪೈಲ್ವಾನ್, ಸದ್ದಾಂ ಮದ್ರಾಸಿ, ನಿಲೋಫರ್, ನಾಜಿಮಾ, ಆಸೀಯಾ, ಯುವ ಮುಖಂಡ ಬಬ್ಲು, ಶೇಖ್ ಬಾಸಿತ್, ಮೈನೋದ್ದಿನ್, ಸೈಫನ್, ಶೇಕ್ ಸಲೀಮ್, ಶೇಕ್ ಅಲ್ತಾಫ್, ಅಜಮೀಲ್ ಅಫಜಲಪೂರ, ಮೊಹಮ್ಮದ್ ಫೈಯಾಜ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News