ಕಲಬುರಗಿ | ಕಳೆದುಹೋಗಿದ್ದ ಹಣ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ, ಚಾಲಕ

ಕಲಬುರಗಿ : ಸ್ಥಳೀಯ ಸಾರಿಗೆ ಸಂಸ್ಥೆ ಘಟಕದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮೀಣ ಮಹಿಳೆಯೋರ್ವಳು ಕಳೆದುಕೊಂಡಿದ್ದ ಹಣವನ್ನು ಬಸ್ ನಿರ್ವಾಹಕ ಮತ್ತು ಚಾಲಕರು ತಮ್ಮಗೆ ದೊರೆತ ಹಣವನ್ನು ಘಕಟ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರ ಸಮ್ಮುಖದಲ್ಲಿ ಮರಳಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.
ಆಳಂದ ತಾಲೂಕಿನ ಮಟಕಿ ಗ್ರಾಮದ ಸುಮ್ಮಯ್ಯಾ ಜಾಫರ್ ಎಂಬುವ ಮಹಿಳೆಯು ಎರಡೂ ದಿನಗಳ ಹಿಂದೆ ಮಟಕಿ ಗ್ರಾಮದಿಂದ ನಿರಗುಡಿ ಮಾರ್ಗಕ್ಕೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವಾಗ ತನ್ನ ಬಳಿಯಿದ್ದ 20 ಸಾವಿರ ರೂಪಾಯಿ ಬಸ್‌ನಲ್ಲಿ ಕಳೆದುಕೊಂಡಿದ್ದರು.
ಬಳಿಕ ಬಸ್ ಪರಿಶೀಲಿಸುವಾಗ ನಿರ್ವಾಹಕ ವಿಜಯಕುಮಾರ ಅವರಿಗೆ ಈ ಹಣ ಪತ್ತೆಯಾಗಿದ್ದು, ಕೂಡಲೇ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರ ಗಮನಕ್ಕೆ ತಂದಿದ್ದಾರೆ. ಇದರಿಂದಾಗಿ ಸಮರ್ಪಕ ಪರಿಶೀಲಿಸಿದ ಹಣ ಕಳೆದುಕೊಂಡಿದ್ದ ಸುಮ್ಮಯ್ಯಾ ಅವರ ಪತಿ ಜಾಫರ್ ಅವರನ್ನು ಕರೆದು 20 ಸಾವಿರ ರೂ/ ನೀಡಿದ್ದಾರೆ. ಹಣ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿ ಕಾರ್ಯವನ್ನು ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರು ಶ್ಲಾಘಿಸಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.