ಕಲಬುರಗಿ | ಸರ್ಕಾರಿ ವೀಕ್ಷಣಾಲಯ/ ಬಾಲಮಂದಿರಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಬರುವ ಸರ್ಕಾರಿ ವೀಕ್ಷಣಾಲಯ/ ಬಾಲಮಂದಿರಗಳಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಾಗಿ ಎಜ್ಯುಕೇಟರ್, ಆರ್ಟ ಆಂಡ್ ಕ್ರಾಫ್ಟ್ ಶಿಕ್ಷಕರು/ ಸಂಗೀತ ಶಿಕ್ಷಕರು, ದೈಹಿಕ/ ಯೋಗಾ ಶಿಕ್ಷಕರ ಹುದ್ದೆಗಳನ್ನು ತಾತ್ಕಾಲಿಕವಾಗಿ (1 ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಯೋಗಾ/ ದೈಹಿಕ ಶಿಕ್ಷಕರು-3 ಹುದ್ದೆಗೆ, ಎಜುಕೇಟರ್-4 ಹುದ್ದೆಗೆ, ಗಣಿತ/ವಿಜ್ಞಾನ ಶಿಕ್ಷಕರು (ಮಹಿಳಾ ಅಭ್ಯರ್ಥಿ)-1 ಹುದ್ದೆಗೆ ಹಾಗೂ ಇಂಗ್ಲೀಷ್ ಶಿಕ್ಷಕರು (ಮಹಿಳಾ ಅಭ್ಯರ್ಥಿ)-1 ಹುದ್ದೆಗಾಗಿ ಅಭ್ಯರ್ಥಿಗಳು ಬಿ.ಎಡ್. ಹಾಗೂ 2 ವರ್ಷಗಳ ಅನುಭವ ಹೊಂದಿರಬೇಕು. ಸಂಗೀತ/ಕ್ರಾಫ್ಟ್/ ಆರ್ಟ ಶಿಕ್ಷಕರು-3 ಹುದ್ದೆಗೆ ಸಂಗೀತ/ವಾದ್ಯ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟಿಫೈಡ್ ಕೋರ್ಸ್ ಪಾಸಾಗಿರಬೇಕು. ಮಿಷನ್ ವಾತ್ಸಲ್ಯ ಮಾರ್ಗಸೂಚಿಯನ್ವಯ ತಿಂಗಳಿಗೆ ನಿಗದಿಪಡಿಸಿದ 10,000 ರೂ.ಗಳ ಗೌರವಧನ ನೀಡಲಾಗುತ್ತದೆ. ಈ ಮೇಲ್ಕಂಡ ಹುದ್ದೆಗಳು ಯಾವುದೇ ಸಂದರ್ಭದಲ್ಲಿ ಖಾಯಂಗೊಳಿಸಲಾಗುವುದಿಲ್ಲ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಎ.29ರ ಸಂಜೆ 5.30 ಗಂಟೆಯೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷಣಾಲಯ ಕಟ್ಟಡ, 1ನೇ ಮಹಡಿ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಎದುರುಗಡೆ, ಕಲಬುರಗಿ ಇವರ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-243219ಗೆ ಸಂಪರ್ಕಿಸಲು ಕೋರಲಾಗಿದೆ.