ಕಲಬುರಗಿ | ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Update: 2025-04-03 21:34 IST
ಕಲಬುರಗಿ | ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ
  • whatsapp icon

ಕಲಬುರಗಿ : ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಟಗೊಳಿಸಲು ನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ ಮಾಡಲಾಯಿತು.

ಆರಂಭವಾಗುವ ಶಿಬಿರದ ದಿನಚರಿ ಆಸನ ಪ್ರಾಣಾಯಾಮ, ಧ್ಯಾನ, ಬೌದ್ಧಿಕ ಚಿಂತನಾ ತರಗತಿ, ಬೌದ್ಧಿಕ ಚಟುವಟಿಕೆಗಳು, ದೇಶಿಕ್ರೀಡೆಗಳ ಅಭ್ಯಾಸ, ಭೋಜನ, ಸಂಗೀತ, ಚಿತ್ರಕಲೆ, ನೃತ್ಯ ಹಾಗೂ ಜಾನಪದ ಕಲೆಗಳ ತರಗತಿಗಳನ್ನು ಒಳಗೊಂಡಿರುತ್ತದೆ ಎಂದು ಶಾಲೆಯ ಪ್ರಾಂಶುಪಾಲ ದೇವಸ್ಸಿ ಮಟ್ಟತಿಲಾನಿ ಅವರು ಹೇಳಿದರು.

ಶಿಬಿರದಲ್ಲಿ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್ಬಾಲ್, ಯೋಗ, ಟೇಬಲ್ ಟೆನಿಸ್, ಬ್ಯಾಸ್ಕೆಟ್‌ಬಾಲ್, ಚೆಸ್ ಸೇರಿದಂತೆ ಇತರೆ ಕ್ರೀಡೆಗಳ ಕುರಿತಾಗಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಅವರಿಗೆ ನುರಿತ ತರಬೇತುದಾರರಿಂದ ತರಬೇತಿಯನ್ನುನೀಡಲಾಗುತ್ತದೆ ಎಂದರು.

ಬೇಸಿಗೆ ಶಿಬಿರವು ಯಶಸ್ವಿಯಾಗಲೆಂದು ಶಾಲೆಯ ಅಧ್ಯಕ್ಷರೂ ಆದ ಎಂಎಲ್ಸಿ ಶಶೀಲ್ ನಮೋಶಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಪ್ರಚಾರ್ಯೆ ಜಸ್ಸಿಂತಾ ಪ್ರಾನ್ಸಿಕಾ, ವಿಷ್ಣುವರ್ಧನ್, ಕೋಚ್ ಗಳಾದ ಪ್ರವೀಣ್ ಪುಣೆ, ಮಂಜುನಾಥ್, ವಿಜಯ್ ರಾಥೋಡ್, ಮಂಜುನಾಥ್, ಸ್ಮೃತಿ ಜಯಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News