ಕಲಬುರಗಿ | ಎ.6ರಂದು ಗಾಣಿಗ ಸಮಾಜದ ವಧು-ವರರ ಬಹೃತ್ ಸಮಾವೇಶ: ಡಾ.ಕೇಶವ ಎಸ್.ಕಾಬಾ

Update: 2025-04-03 18:50 IST
Photo of Press meet
  • whatsapp icon

ಕಲಬುರಗಿ : ಗಾಣಿಗ ಸಮಾಜದ ಜಿಲ್ಲಾ ಘಟಕ ಹಾಗೂ ಡಾ.ಚೌಧರಿ ಮತ್ತು ಡಾ.ಕಾಬಾ ಕಲ್ಯಾಣ ವೇದಿಕೆಯ ಸಹಯೋಗದಲ್ಲಿ ಎ.6 ರಂದು ಬೆಳಗ್ಗೆ 9 ಗಂಟೆಗೆ ನಗರದ ಹೊಸ ಜೇವರ್ಗಿ ರಸ್ತೆಯ ಕೆ.ಇ.ಬಿ. ಕಲ್ಯಾಣ ಮಂಟಪದಲ್ಲಿ ತೃತೀಯ ಅಂತರ ರಾಜ್ಯಮಟ್ಟದ ವಧು- ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ವೇದಿಕೆಯ ರಾಜ್ಯ ಸಂಚಾಲಕ ಡಾ.ಕೇಶವ ಎಸ್.ಕಾಬಾ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಿಂತಣಿ ಬ್ರೀಜ್ ವೀರಗೋಟೆ ಅಡವಿಲಿಂಗ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸುವರು. ವನಶ್ರೀ ಮಠದ ಡಾ.ಜಯಬಸವ ಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕರಾದ ರಮೇಶ ಬಿ.ಭೂಸನೂರ, ಎಸ್.ಕೆ.ಬೆಳುಬ್ಬಿ, ಶಿವರಾಜ ಎಸ್.ಸಜ್ಜನರ, ಆನಂದ ಎಸ್.ನ್ಯಾಮಗೌಡ, ಬಿಜಾಪುರ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶರಣಬಸಪ್ಪ ಅರಕೇರಿ, ಮಾಜಿ ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಎಸ್.ಮಾನಕರ್, ಶಿವಲಿಂಗಪ್ಪ ಬಿ.ಕಲಶೆಟ್ಟಿ, ಕಲ್ಯಾಣ ವೇದಿಕೆ ರಾಜ್ಯ ಸಂಚಾಲಕ ಉಮಾಪತಿ ಚೌಧರಿ, ಕಲ್ಯಾಣ ವೇದಿಕೆ ರಾಜ್ಯ ಸದಸ್ಯೆ ಜ್ಯೋತಿವೀರ ಭದ್ರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

ಸಮಾಜದವರ ಅನುಕೂಲಕ್ಕಾಗಿಯೇ ಮುಖಾಮುಖಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ 380 ವಧು ವರರು ನೋಂದಾಯಿಸಿಕೊಂಡಿದ್ದು, ಸಮಾಜದ ಆಸಕ್ತ ವಧು ವರರ ಹೆಸರು ನೋಂದಾಯಿಸಿಕೊಂಡು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶಿವಾನಂದ ದ್ಯಾಮಗೌಡ, ಬಸಲಿಂಗಗೌಡ ಬಿರಾದಾರ್, ಚೆನ್ನಮಲ್ಲಪ್ಪಗೌಡ ಪಾಟೀಲ್, ಬಾಬುಗೌಡ ಪಾಟೀಲ್, ಸುರೇಶ ಪಾಟೀಲ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News