ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ : ಬಿ.ಫೌಝಿಯಾ ತರನ್ನುಮ್

Update: 2024-11-12 16:24 GMT

ಕಲಬುರಗಿ : ಕಠಿಣ ಪರಿಶ್ರಮದಿಂದ ಮುಂದೆ ಸಾಗಿದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಐಎಎಸ್, ಐಪಿಎಸ್ ಅಧಿಕಾರಿಯಾದರೆ ಮಾತ್ರ ಸಾಧನೆ ಅಲ್ಲ. ಬದಲಾಗಿ ನಮ್ಮಿಷ್ಟದ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದಲ್ಲಿ ಅದು ಸಹ ಸಾಧನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ.

ಮಂಗಳವಾರ ಚಿತ್ತಾಪುರ ತಾಲೂಕಿನ ಮಾಡಬೂಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ "ಸ್ಪೂರ್ತಿಯ ಕಿರಣ" ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾನು ನಿಮ್ಮಂತೆ ಸರಳ ಮತ್ತು ಮಧ್ಯಮ ಕುಟುಂಬದಿಂದ ಬಂದಿರುವೆ. ನಮ್ಮ ಮನೆಯಲ್ಲಿ ಯಾರು ಸರಕಾರಿ ಕೆಲಸದಲ್ಲಿ ಇರಲಿಲ್ಲ. ಕಷ್ಟಪಟ್ಟು ಓದಿದ ಪರಿಣಾಮ ಐಎಎಸ್ ಅಧಿಕಾರಿಯಾಗಿರುವೆ ನೀವು ಸಹ ಛಲ, ಕಷ್ಟಪಟ್ಟು ಅಭ್ಯಾಸ ಮಾಡಿದ್ದಲ್ಲಿ ಯಶಸ್ಸು ಸಾಧ್ಯ ಎಂದರು.

ಡಿ.ಡಿ.ಪಿ.ಯು ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ ಹೆದರುವ ಮನಸ್ಥಿತಿ ಬಿಡಬೇಕು. ಪರೀಕ್ಷೆಯನ್ನು ಖುಷಿಯಿಂದ ಬರೆಯಬೇಕು. ಪ್ರತಿ ವಿದ್ಯಾರ್ಥಿಯ ವ್ಯಕ್ತಿತ್ವ ಬೇರೆಯಾಗಿರುತ್ತದೆ. ಹೀಗಾಗಿ ಇತರೆ ವಿದ್ಯಾರ್ಥಿಯನ್ನು ನಕಲು ಮಾಡದೆ ತಮ್ಮಿಷ್ಟದ ದಾರಿಯಲ್ಲಿ ಗುರಿಯೆಡೆಗೆ ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆನಂದಶೀಲ ಕೆ., ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಭಾವತಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News