ಕಲಬುರಗಿ | ಗ್ರಾಪಂ ಮಾಜಿ ಸದಸ್ಯನ ಹತ್ಯೆ ಆರೋಪಿಯ ಗುಂಡಿಕ್ಕಿ ಬಂಧನ

Update: 2024-09-21 11:30 IST
ಕಲಬುರಗಿ | ಗ್ರಾಪಂ ಮಾಜಿ ಸದಸ್ಯನ ಹತ್ಯೆ ಆರೋಪಿಯ ಗುಂಡಿಕ್ಕಿ ಬಂಧನ
  • whatsapp icon

ಕಲಬುರಗಿ: ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಕೊಲೆ ಪ್ರಕರಣದ ಆರೋಪಿಯನ್ನು ಇಂದು ಮುಂಜಾನೆ ಕಾಲಿಗೆ ಗುಂಡಿಕ್ಕಿ ಬಂಧಿಸಿರುವ ಘಟನೆ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಣ ಪೂಜಾರಿ ಹಿತ್ತಲಸೀರೂರು (45) ಬಂಧಿತ ಆರೋಪಿ.

ವಿಶ್ವನಾಥ ಜಮಾದಾರ್ ಅವರನ್ನು ಕಳೆದ ಶುಕ್ರವಾರ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಹಿತ್ತಲಸೀರೂರು ಎಂಬಾತ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿದ್ದರುವ ಬಗ್ಗೆ ಮಾಹಿತಿ ಪಡೆದ ಅಫ್ಝಲ್ ಪುರ ಠಾಣೆಯ ಪೊಲೀಸರು ಇಂದು ಮುಂಜಾನೆ ಅಲ್ಲಿಗೆ ತೆರಳಿದ್ದಾರೆ. ಬಂಧಿಸಲು ಮುಂದಾದಾಗ ಲಕ್ಷ್ಮಣ ಪೂಜಾರಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್ಸೈ ಇಂದುಮತಿ ಆರೋಪಿಯ ಬಲಗಾಲಿಗೆ ಶೂಟೌಟ್ ಮಾಡಿದ್ದಾರೆ.

Full View

ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶ್ವನಾಥ್ ಜಮಾದಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಕ್ಷ್ಮಣ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ ಈತನ ವಿರುದ್ಧ 11 ಕೇಸ್ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News