ಕಲಬುರಗಿ| ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಕೊಲೆ ಶಂಕೆ

Update: 2024-01-20 07:09 GMT

ಸಾಂದರ್ಭಿಕ ಚಿತ್ರ (PTI)

ಕಲಬುರಗಿ: ಅಪಚಿರಿಚಿತ ವ್ಯಕ್ತಿಯ ನಗ್ನ ಸ್ಥಿತಿಯ ಮೃತದೇಹ ಪತ್ತೆಯಾದ ಘಟನೆ ಜೇವರ್ಗಿ ತಾಲೂಕಿನ ಸೊನ್ನ ಮತ್ತು ಹಿಪ್ಪರಗಾ ಎಸ್.ಎನ್. ಮಧ್ಯೆ ಪತ್ತೆಯಾಗಿದೆ.

ಪೂರ್ಣ ಬೆತ್ತಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೈಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹಲವಾರು ಗಾಯಗಳು ಕಂಡುಬಂದಿವೆ. ಮೃತನ ವಿಳಾಸ ಹಾಗೂ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ಮೃತದೇಹ ಪತ್ತೆಯಾದ ಸ್ಥಳದ 100 ಮೀಟರ್ ಅಂತರದಲ್ಲಿ ಒಂದು ಚೀಲ ಸಿಕ್ಕಿದ್ದು, ಅದರಲ್ಲಿ ಬುರ್ಖಾ ಹಾಗೂ ಅಂಗಿ ದೊರಕಿದೆ. ಅಂಗಿಯ ಮೇಲೆ ಜಮಾದಾರ್ ಟೇಲರ್ ಜೇವರ್ಗಿ ಎಂದು ಬರೆಯಲಾಗಿದೆ. ಅನೈತಿಕ ಸಂಬಂಧದಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಡಿವೈಎಸ್‍ಪಿ ಉಮೇಶ್ ಚಿಕ್ಕಮಠ್, ಸಿಪಿಐ ರಾಜೇಸಾಬ್ ನದಾಫ್, ಪಿಎಸ್‍ಐ ಅಶೋಕ್ ಪಾಟೀಲ್ ಅವರು ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಮೃತದೇಹವನ್ನು ಕಲಬುಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಈ ಕುರಿತು ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪ್ರತಿಕ್ರಿಯಿಸಿ, ಯಾರೋ ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಸೊನ್ನ ಗ್ರಾಮದ ಹತ್ತಿರ ಬೀಸಾಕಿ ಹೋಗಿದ್ದಾರೆ. ಮೃತದೇಹ ಸಿಕ್ಕ ಸ್ಥಳದ ನೂರು ಮೀಟರ್ ಅಂತರದಲ್ಲಿ ಕೈಚೀಲ ದೊರಕಿದ್ದು, ಮೃತನ ಗುರುತು ಹಾಗೂ ವಿಳಾಸ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News