ಕಲಬುರಗಿ | ಏ.6 ರಂದು 'ಕಲ್ಯಾಣ ಕಲಾ ಉತ್ಸವ' : ಅಲ್ಲಮಪ್ರಭು ನಾವದಗೆರೆ

Update: 2025-03-29 16:56 IST
Photo of Press meet
  • whatsapp icon

ಕಲಬುರಗಿ : ವಚನ ಚಾರಿಟಬಲ್ ಟ್ರಸ್ಟ್ ವತಿಯಿಂದ 'ಕಲ್ಯಾಣ ಕಲಾ ಉತ್ಸವ' ಹಮ್ಮಿಕೊಂಡಿದ್ದು, ಏ.6ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಡಿಷನ್ ನಡೆಸಲಾಗುವುದು ಎಂದು ಟ್ರಸ್ಟ್ ಸಂಸ್ಥಾಪಕ ಅಲ್ಲಮಪ್ರಭು ನಾವದಗೆರೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಕಲಾವಿದರು, ಯುವಕರು ಹಾಗೂ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹ ನೀಡಲು ಈ ಉತ್ಸವ ಆಯೋಜಿಸಿದ್ದು, ನೃತ್ಯ, ಹಾಡುಗಾರಿಕೆ, ನಟನೆ ಮತ್ತು ಸಾಂಪ್ರದಾಯಿಕ ಫ್ಯಾಶನ್ ಶೋ ಸ್ಪರ್ಧೆಗೆ ಆಡಿಷನ್ ನಡೆಯಲಿದೆ. 5-13 ವರ್ಷ ಮತ್ತು 14-30 ವಯಸ್ಸಿನ ಕಲಾವಿದರು ಹಾಗೂ ಮಕ್ಕಳು ಪಾಲ್ಗೊಳ್ಳಬಹುದು ಎಂದರು.

ನಿರ್ದೇಶಕ ದಯಾನಂದ ಹಿರೇಮಠ ಮಾತನಾಡಿ, ಆಡಿಷನ್ ನಂತರ ಆಯ್ಕೆಯಾದ ಕಲಾವಿದರಿಗೆ 10ದಿನ ತರಬೇತಿ ನೀಡಲಾಗುವುದು. ಏ.27ರಂದು ನಡೆಯುವ ಫೈನಲ್‌ನಲ್ಲಿ ವಿಜೇತರಿಗೆ 15 ಸಾವಿರ ಪ್ರಥಮ, 5 ಸಾವಿರ ದ್ವಿತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ನೋಂದಣಿಗಾಗಿ ಮೊ:6362056060, 9845319998, 8618101849 ಸಂಪರ್ಕಿಸಬಹುದು ಎಂದರು.

ಪ್ರಧಾನ ಕಾರ್ಯದರ್ಶಿ ಶಿವಶಂಕರ ಟೋಕ್ರೆ, ಪ್ರಮುಖರಾದ ಆರ್.ಜಿ.ಶೆಟಕಾರ, ಬಸವರಾಜ ಮೊರಬದ, ಹಣಮಂತರಾವ ತೀರ್ಥೆ, ಬಾಬುರಾವ ಪಾಟೀಲ, ಜಗದೀಶ ಔರಾದಕರ್, ಅಂಬಾರಾಯ ಬಿರಾದಾರ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News