ಕಲಬುರಗಿ: ವಕೀಲನ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2023-12-08 07:25 GMT

ಕಲಬುರಗಿ: ವಕೀಲ ಈರಣ್ಣ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವ ವಿದ್ಯಾಲಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಲ್ಲಿನಾಥ್ ಬಸಣ್ಣ (45), ಭಾಗಣ್ಣ ಭಗವಾನ್ ಅವಣಪ್ಪ (20) ಹಾಗೂ ಅವಣಪ್ಪ ಭಾಗವಂತರಾವ್ (48) ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಕಲಬುರಗಿ ತಾಲ್ಲೂಕಿನ ಉದನೂರ್ ನಿವಾಸಿಗಳಾಗಿದ್ದಾರೆ.

ಗುರುವಾರ ನಗರದ ರಾಮ ಮಂದಿರ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನ್ಯಾಯವಾದಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ಪ್ರಕರಣ ಸಂಬಂಧ  ಆರು ಮಂದಿಯ ವಿರುದ್ಧ ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ಇಲಾಖೆಯಿಂದ ಎರಡು ವಿಶೇಷ ತಂಡ ರಚನೆ ಮಾಡಿ,  ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News