ಕಲಬುರಗಿ | ಜಾನಪದ ಕಲಾವಿದರನ್ನು ಬೆಳೆಸಲು ಸಂಘ ಸಂಸ್ಥೆಗಳು ಮುಂದಾಗಬೇಕು : ಕೋಬಾಳ

Update: 2024-12-21 09:47 GMT

ಕಲಬುರಗಿ : ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳು ಅನೇಕ ರೀತಿಯ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಮಾಡುವ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸಿದಾಗ ಮಾತ್ರ ಜಾನಪದ ಕಲೆ ಉಳಿಸಿ ಬೆಳೆಸಬಹುದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ ಕೋಬಾಳ್ ಹೇಳಿದರು.

ಶುಕ್ರವಾರ ನಗರದ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಅಭಿನವ ಶ್ರೀ ಸಾಂಸ್ಕೃತಿಕ ಕಲಾ ಸಂಘ ಮಾದನ ಹಿಪ್ಪರಗಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ʼಜಾನಪದ ಸಂಭ್ರಮ ಕಾರ್ಯಕ್ರಮʼದಲ್ಲಿ ಭಾಗವಹಿಸಿ ಮಾತನಾಡಿದರು. ದೀಪಕ್ ಪವಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವು ಸ್ವಾಮಿ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ್ ಬಿರಾದಾರ್ ಜ್ಯೋತಿ ಬೆಳಗಿಸಿದರು, ಬಸವರಾಜ್ ಪಾಟೀಲ್ ಅನಿಲ್ ಕುಮಾರ್ ಮೊರೆ, ಈರಣ್ಣ ನಾಗೂರ್, ಭಾವ ಸಾಬ್ ತಳವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀಮತಿ ಪವಿತ್ರಾ ರಾಜನಾಳ್, ಅಣ್ಣಾರಾವ್ ಮತ್ತಿಮೂಡ್, ಸೈದಪ್ಪ ಸಪ್ಪನಗೋಳ, ಸೂರ್ಯಕಾಂತ್ ಪೂಜಾರಿ, ಶಿವಕುಮಾರ್ ಪಾಟೀಲ್, ರಾಚಯ್ಯ ಸ್ವಾಮಿ ರಟ್ಕಲ್, ಬಸಯ್ಯ ಬಿ ಗುತ್ತೇದಾರ್, ವಿಜಯಲಕ್ಷ್ಮಿ ಎಸ್ ಕೆಂಗನಾಳ್, ತೇಜು ನಾಗೋಜಿ, ಪ್ರಭು ಚಕ್ಕಿ, ವಿನೋದ್ ದಸ್ತಾಪುರ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಗದೀಶ್ ಹೂಗಾರ್. ರವಿ ಸ್ವಾಮಿ ಗೋಟು, ಶಿವಾನಂದ್ ಹಿತ್ತಲ ಶಿರೂರ, ವಾದ್ಯ ಸಹಕಾರ ನೀಡಿದರು. ತೇಜು ಎಸ್.ನಾಗೋಜಿ ಪ್ರಾರ್ಥಿಸಿದರು , ರಾಜಕುಮಾರ್ ಮಾಡ್ಯಾಳ ಸ್ವಾಗತಿಸಿದರು, ತೋಟಯ್ಯ ಸ್ವಾಮಿ ಅಬ್ಬೆ ತುಮಕೂರ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಕಾಂತ್ ಗುಳಗಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News