ಕಲಬುರಗಿ | ಸಮಾಜ ಹೋರಾಟಗಾರರನ್ನು ಗುರುತಿಸುವುದು ತತ್ವ, ಸಿದ್ದಾಂತದ ಬದ್ದತೆಯಿಂದ : ಕಾಂ.ಪ್ರಭುದೇವ ಯಳಸಂಗಿ

Update: 2025-04-06 19:05 IST
ಕಲಬುರಗಿ | ಸಮಾಜ ಹೋರಾಟಗಾರರನ್ನು ಗುರುತಿಸುವುದು ತತ್ವ, ಸಿದ್ದಾಂತದ ಬದ್ದತೆಯಿಂದ : ಕಾಂ.ಪ್ರಭುದೇವ ಯಳಸಂಗಿ
  • whatsapp icon

ಕಲಬುರಗಿ : ಹೋರಾಟಗಾರರಿಗೆ ಸಾವು-ಬದುಕಿನ ಭಯವಿರುವುದಿಲ್ಲ. ಹೋರಾಟದಿಂದ ನ್ಯಾಯ ಪಡೆಯುವುದೇ ಜೀವನವಾಗಿಸಿಕೊಳ್ಳುತ್ತಾರೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಉಪಾಧ್ಯಕ್ಷರಾದ ಕಾಂ.ಪ್ರಭುದೇವ ಯಳಸಂಗಿ ಹೇಳಿದರು.

ನಗರದ ಜೇವರ್ಗಿ ಕ್ರಾಸ್ನಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ಎಐಟಿಯುಸಿ ಜಿಲ್ಲಾ ಸಮಿತಿ ಹಾಗೂ ಕೆಎಸ್ಆರ್ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್ ಇತ್ತೇಚಿಗೆ ನಿಧನ ಹೊಂದಿರುವ ಕೆಎಸ್ಆರ್ಟಿಸಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಕಲಬುರಗಿ ವಿಭಾಗ-2ರ ಪ್ರಧಾನ ಕಾರ್ಯದರ್ಶಿ ಕಾಂ. ಅಬ್ದುಲ್ ಕಲೀಂ ರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂ.ಅಬ್ದುಲ್ ಕಲೀಂ ರವರು ಜೀವಮಾನ ಪೂರ್ತಿ ಜಾತ್ಯತೀತವಾಗಿ ಬದುಕು ನಡೆಸಿದವರು. ಅವರೊಬ್ಬ ಆದರ್ಶ ಮತ್ತು ತತ್ವ ನಿಷ್ಠೆ ಹಾಗೂ ನಿಷ್ಠುರ ವ್ಯಕ್ತಿತ್ವ ಉಳವರಾಗಿದ್ದರು. ಅವರ ಅಗಲಿಕೆಯಿಂದ ಒಬ್ಬ ಪ್ರಾಮಾಣಿಕ ಹಾಗೂ ನಿಷ್ಠಾವಂತ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ. ಅವರ ತತ್ವ ಸಿದ್ಧಾಂತಗಳು ಇಂದಿನ ಹೋರಾಟಗಾರರಿಗೆ ಅವಶ್ಯಕತೆ ಇದೆ. ಅವರ ವಿಚಾರಗಳೊಂದಿಗೆ ಹೋರಾಟಗಳನ್ನು ಮುಂದುವರೆಸೋಣ ಎಂದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಮಹೇಶಕುಮಾರ್ ರಾಠೋಡ ಮಾತನಾಡಿದರು.

ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎಚ್.ಎಸ್ ಪತಕಿ, ಕಾರ್ಯದರ್ಶಿಗಳಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ, ವಿಶಾಲ ನಂದೂರಕರ್, ಶಿವಲಿಂಗಮ್ಮ ಲೇಂಗಟಿಕರ್, ಸೂರ್ಯಕಾಂತ ಸೊನ್ನದ ಹಾಗೂ ಕೆಎಸ್ಆರ್ಟಿಸಿ ಸಂಘಟನೆಗಳ ಮುಖಂಡರಾದ ಚಂದ್ರಕಾಂತ ಗದ್ದಗಿ, ಜಯರಾಮ ರಾಠೋಡ, ಶಿವಪುತ್ರ ಬೆಳಮಗಿ, ಶಿವಶಾಂತ ಮುನ್ನೋಳ್ಳಿ, ಬಸವರಾಜ ಕಣ್ಣಿ, ಶರಣಬಸಪ್ಪ ಗಣಜಲಖೇಡ, ಮಹ್ಮದ್ ಹುಸೇನ್, ಸಿದ್ದಣ್ಣ ಕಣ್ಣೂರ, ಮಲ್ಲಿಕಾರ್ಜುನ ಮನಗುಂಡೆ, ಬಸವರಾಜ ಕೋರಬಾ ಮಹ್ಮದ್ ಸಾದಿಖ್, ಭರತ್ ಶಿಂಗೇರಿ, ವೀರಭದ್ರಪ್ಪ ಅರಕೇರಿ, ಸೂರ್ಯಕಾಂತ ಸಿಂಗೆ, ರೇವಣಸಿದ್ದಯ್ಯ ಹಿರೇಮಠ, ಶರಬಸಯ್ಯ ಸ್ವಾಮಿ, ಅರವಿಂದ ಪಾಟೀಲ್, ಬಾಬುರಾವ್ ಲವಟೆ, ಶಾಂತಪ್ಪ, ಚಂದ್ರಕಾಂತ ಬಿದನೂರ, ಸೈಯದ್ ಕಲಾಂ, ಬಸವರಾಜ ದೇಸಾಯಿ, ಕೆಎಸ್ಆರ್ಟಿಸಿ ಕಲಬುರಗಿ ವಿಭಾಗ-1ರ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಉದಯಕುಮಾರ ಡಾಂಗೆ ಹಾಗೂ ಕಾಂ. ಅಬ್ದುಲ್ ಕಲೀಂ ರವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಜನ ಕಾರ್ಮಿಕ ಮುಖಂಡರು ಮಾತನಾಡಿದರು. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಕಲಬುರಗಿ ವಿಭಾಗ-1 ಹಾಗೂ ಕಲಬುರಗಿ ವಿಭಾಗ-2ರ ಕಾರ್ಮಿಕರು ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ, ಸಂತಾಪ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News