ರಾಯಲ್ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ: ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಯ

Update: 2024-12-25 09:00 GMT

ಕಲಬುರಗಿ: ಕಲೆ ಸಾಹಿತ್ಯ ಸಂಸ್ಕೃತಿಯ ಶ್ರೀಮಂತಿಕೆಗೆ ಲಲಿತ ಕಲೆ ದೊಡ್ಡ ಕೊಡುಗೆ ನೀಡಿದೆ. ರಾಜ್ಯದಲ್ಲಿ ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇ ಬೇಕು ಎಂದು ಖ್ಯಾತ ಕಲಾವಿದ ಪ್ರೊ ಎಸ್.ಸಿ ಪಾಟೀಲ ಸರಕಾರಕ್ಕೆ ಒತ್ತಾಯಿಸಿದರು.

ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಇಂಡಿಯನ್ ರಾಯಲ್ ಅಕಾಡೆಮಿಯ 20 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಎಲ್ಲಾ ಜಾತಿ ಧರ್ಮದವರನ್ನು ಒಂದುಗೂಡಿಸುವ ಶಕ್ತಿ ಕಲೆಗಿದೆ. ಯಾವುದೇ ಕಲೆ ಬೆಳೆಯಬೇಕಾದರೆ ಮಕ್ಕಳಲ್ಲಿ ಕಲಾ ಸಂಸ್ಕಾರ ಕೊಡಬೇಕು. ಇದರಿಂದ ಕಲೆ ಉಳಿದು ಬೆಳೆಯ ಬಲ್ಲದು. ಇಂದು ಲಲಿತ ಕಲೆಗೆ ರಾಜ್ಯದ ಅನೇಕ ಚಿತ್ರ ಕಲಾವಿದರು ದೊಡ್ಡ ಕೊಡುಗೆ ನೀಡಿದೆ ಎಂದರು.

ಚಿತ್ರ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರ ನೀಡುತ್ತಿದೆ. ಕಲಾವಿದರಿಗೆ ಯಾವುದೇ ಸಹಾಯ ಧನ ಇಲ್ಲ. ಆದರೆ ಸರಕಾರ ಸರಾಯಧನ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ರಜಿಸ್ಟರ್ ಪ್ರೊ. ಅಜೀಮ ಪಾಶಾ ಅವರು ಮಾತನಾಡಿ, ಬಹತ್ವ ಸಂಸ್ಕ್ರತಿ ಪ್ರತಿಪಾದಿಸುವ ಶಕ್ತಿ ಚಿತ್ರಕಲೆಗಿದೆ. ಜಾತಿ ಧರ್ಮಗಳಾಚೆ ಕಲೆ ಅರಳುತ್ತದೆ. ಅದಕ್ಕೆ ಸಂಕುಚಿತತೆ ಇಲ್ಲ. ವಿಶಾಲ ದೃಷ್ಠಿಕೋನ ಚಿತ್ರಕಲೆಗಳಲ್ಲಿದೆ. ನಾವು ಒಂದಾಗಿ ಬೆರೆಯುವಲ್ಲಿ ಲಲಿತ ಕಲೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲ ತಿಪ್ಪಿ ಮಾತನಾಡಿ, ಜಿಲ್ಲೆಯಲ್ಲಿ ಬಹುಮುಖ ಪ್ರತಿಭೆಯ ಅನೇಕ ಚಿತ್ರಕಲಾವಿದರಿದ್ದಾರೆ. ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಾ ಪರಂಪರೆಗೆ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸ ನಡೆಯಬೇಕಾಗಿದೆ ಎಂದರು.

ಬರುವ ಜನೆವರಿ ತಿಂಗಳಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ದೃಶ್ಯ ಕಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲ ನಿರ್ಧರಿಸಲಾಗಿದೆ ಎಂದರು.

ರಾಯಲ್ ಅಕಾಡೆಮಿ ಅಧ್ಯಕ್ಷ ರೆಹಮನ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಇಂಡಿಯನ್ ರಾಯಲ್ ಅಕಾಡೆಮಿ ವತಿಯಿಂದ ಆನಂದ ಎಂ ಬಾಬು, ಅಂಬರ ಖಾನೆ ಮೈಸೂರು, ವಾಜೀದ ಸಾಜೀದ್ ಮಾನ್ವಿ, ಬೆಂಗಳೂರಿನ ಜಿ.ಎಸ್.ಬಿ ಅಗ್ನಿಹೋತ್ರಿ ಅವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜತೆಗೆ ಇತರರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಕಲಾವಿದರಾದ ಎ ಎಸ್ ಪಾಟೀಲ, ರಾಜಶೇಖರ ಶಾಮಣ್ಣ,ರಾಘವೇಂದ್ರ ಬುರ್ಲಿ, ನಾಗೇಂದ್ರ ಸರಕಾಗಿ, ಶೇಖರ ಬ್ಯಾಕೋಡ, ಸಯ್ಯದ ಮುಸ್ತಾಫ, ಶೇಖ ಅಸನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಆಯೋಜಿದ್ದೀನ ಪಟೇಲ್, ರಾಜೇಂದ್ರ ಮಾಡಬೂಳ ಹಾಗೂ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News