ಸಚಿನ್ ಆತ್ಮಹತ್ಯೆ ಪ್ರಕರಣ: ಆರೋಪಿ ರಾಜು ಕಪನೂರ್ ಸೇರಿದಂತೆ ನಾಲ್ವರ ಮನೆ ಮೇಲೆ ಸಿಐಡಿ ದಾಳಿ
Update: 2025-01-14 05:54 GMT
ಕಲಬುರಗಿ: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜು ಕಪನೂರ್ ಸೇರಿದಂತೆ ನಾಲ್ವರು ಆರೋಪಿಗಳ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿದೆ.
ಇಲ್ಲಿನ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ರಾಜು ಕಪನೂರ್, ಇನ್ನುಳಿದ ಆರೋಪಿಗಳಾದ ಗೋರಖನಾಥ್, ರಾಮನಗೌಡ ಮತ್ತು ನಂದಕುಮಾರ್ ಮನೆಗಳ ಮೇಲೆ ಇಂದು ಬೆಳಗ್ಗೆ ಸಿಐಡಿ ತಂಡ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ.
ಇಬ್ಬರು ಡಿವೈಎಸ್ಪಿ, ಒಬ್ಬರು ಇನ್ಸಪೆಕ್ಟರ್ ಸೇರಿದಂತೆ 40 ಸಿಬ್ಬಂದಿಯವರು ಹೊಂದಿದ ತಂಡ ಬೆಳಗ್ಗೆ ದಾಳಿ ನಡೆಸಿ, ಸಚಿನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ಕಲೆ ಹಾಕುತ್ತಿದೆ.