ಶಹಾಬಾದ್ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ಕಸಾಪದಿಂದ ಪ್ರಿಯಾಂಕ್ ಖರ್ಗೆಗೆ ಆಹ್ವಾನ
ಕಲಬುರಗಿ : ಶಹಾಬಾದ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಕಸಾಪ ಮುಖಂಡರು ಭೇಟಿ ಮಾಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಮರೆಪ್ಪ ಹಳ್ಳಿ ಹಾಗೂ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಕಸಾಪ ಸಮ್ಮೇಳನ ಸಮಿತಿ ಸದಸ್ಯರೆಲ್ಲರೂ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಲಾಗಿದೆ. ಆದ್ದರಿಂದ ತಾವು ಬಿಡುವು ಮಾಡಿಕೊಂಡು ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಸ್ಥಾನವನ್ನು ಅಲಂಕರಿಸಬೇಕೆoದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಣವೀರ ಇಂಗಿನಶೆಟ್ಟಿ, ಡಾ.ರಶೀದ್ ಮರ್ಚಂಟ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾಣಿಕ್ ಗೌಡ, ಶರಣಗೌಡ ಪಾಟೀಲ ಗೋಳಾ(ಕೆ), ಪ್ರಶಾಂತ ಮರಗೋಳ, ಸಾಹೇಬಗೌಡ ಬೋಗುಂಡಿ, ವಿಶ್ವರಾಧ್ಯ ಬೀರಾಳ, ಭೀಮುಗೌಡ ಖೇಣಿ, ಪೀರಪಾಶಾ, ದೇವೆಂದ್ರ ಕಾರೊಳ್ಳಿ, ಹಾಷಮ್ ಖಾನ್, ಶರಣಬಸಪ್ಪ ಧನ್ನಾ, ರುದ್ರಗೌಡ ಪಾಟೀಲ, ಮುಜಾಹಿದ್ ಹುಸೇನ್, ಮುಹಮ್ಮದ್ ಜಾಕೀರ್ ಇತರರು ಉಪಸ್ಥಿತರಿದ್ದರು.