ನ.10ರಂದು ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ: ರಾಜಶೇಖರ ಯಂಕಂಚಿ

Update: 2024-11-08 08:43 GMT

ಕಲಬುರಗಿ: ಬಸವ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಸವ ಸೇವಾ ಪ್ರತಿಷ್ಠಾನದಿಂದ ಆಳಂದ ತಾಲೂಕಿನ ಭೂಸನೂರಿನಲ್ಲಿ ಸ್ಥಾಪಿಸಲಾದ ನೀಲಾಂಬಿಕಾ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ನವೆಂಬರ 10ರಂದು ಏರ್ಪಡಿಸಲಾಗಿದೆ ಎಂದು ಬಸವ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಶರಣರ ಕಾಯಕ ಜೀವನ ಪ್ರವಚನ ಕಾರ್ಯಕ್ರಮವನ್ನು ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು ಉದ್ಘಟಿಸಿದ್ದಾರೆ, ಈ ಪ್ರವಚನ ಕಾರ್ಯಕ್ರಮ ನ.10ರವರೆಗೆ ನಡೆಯಲಿದೆ.

ನ.10ರಂದು ನಡೆಯಲಿರುವ ನೀಲಂಬಿಕಾ ಕಲ್ಯಾಣ ಮಂಟಪ ಮತ್ತು ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸುವರು, ಈ ವೇಳೆಯಲ್ಲಿ ಗುರು ಮಹಾಂತ ಸ್ವಾಮಿಗಳು, ಶಿವಾನಂದ ಸ್ವಾಮೀಜಿ, ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರು ಸಮಾರಂಭವನ್ನು ಉದ್ಘಾಟಿಸುವರು, ಡಾ. ಶರಣಪ್ರಕಾಶ್ ಪಾಟೀಲ್ ಅವರು ಬಸವಣ್ಣನವರ ಮೂರ್ತಿಯನ್ನು ಅನಾವರಣಗೊಳಿಸಿದರು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು, ಶಾಸಕ ಬಿ.ಆರ್.ಪಾಟೀಲ್, ಡಾ. ಅಜಯ್ ಸಿಂಗ್, ರಾಧಾಕೃಷ್ಣ ದೊಡ್ಡಮನಿ, ಸಾಗರ ಖಂಡ್ರೆ, ಅಲ್ಲಮಪ್ರಭು ಪಾಟೀಲ್, ಎಂ.ವೈ ಪಾಟೀಲ್ ಸೇರಿದಂತೆ ಇತರರು ಹಾಜರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಬಾಬುರಾವ್ ಪಾಟೀಲ್, ರೇವಣಸಿದ್ಯಯ್ಯ ಮಠ, ಬಾಬುರಾವ್ ಗೊಬ್ಬುರ್, ಭೀಮಶೆಟ್ಟಿ ಪಾರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News