ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-04-06 19:56 IST
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಿ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌
  • whatsapp icon

ಕಲಬುರಗಿ : ಕ್ರೀಡೆಯಲ್ಲಿ ಸೋಲು - ಗೆಲುವು ಮುಖ್ಯವಲ್ಲ, ಕ್ರೀಡಾಮನೋಭಾವದಿಂದ ಪಾಲ್ಗೊಳ್ಳಿ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಕರೆ ನೀಡಿದರು.

ರವಿವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ ರಾಜ್ಯ ನೌಕರ ಸಂಘ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ 2024-25ನೇ ಸಾಲಿನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರು, ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೇಗಳಿಗೆ ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಬಲೂನು ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಗೆಲುವಿಗೆ ಹಿಗ್ಗದೆ, ಸೋಲಿಗೆ ಕುಗ್ಗದೆ, ತಾವೆಲ್ಲರೂ ಹಿತ ಪ್ರಜ್ಞೆರಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯನ್ನು ಆಯೋಜಿಸಿದ ಎಲ್ಲ ನೌಕರರು ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ್ದ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ, ಬಿಸಿಲಿನ ತಾಪಮಾನ 42 ಡಿಗ್ರಿ ಇದ್ದರೂ ಕೂಡ ತಾವೆಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿದ್ಧೀರಿ, ನಿಮ್ಮ ಉತ್ಸಾಹಕ್ಕೆ ಅಭಿನಂದನೆ ಎಂದರು.

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಕಳೆದ ಎರಡು ದಿನ ಬಿಸಿಲು ಬಹಳ ಇತ್ತು. ನಿನ್ನೆ ಸ್ವಲ್ಪ ಮಳೆ ಬಂದಿರವುದರಿಂದ ಸ್ವಲ್ಪ ತಂಪಾಗಿದೆ. ಆದರೂ ನಮ್ಮ ಸ್ವಾಸ್ಥ್ಯ ಮತ್ತು ನಮ್ಮ ಆರೋಗ್ಯದ ಕಡೆ ಗಮನ ಹರಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಗುಂಡು ಎಸೆತದಲ್ಲಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕ್ರೀಡಾಪಟುಗಳು ರನ್ನಿಂಗ್, ರೀಲೆ, ಲಾಂಗ್‌ ಜಂಪ್, ಹೈ ಜಂಪ್, ಶಾರ್ಟ್ ಪುಟ್, ಡಿಸ್ಕಸ್, ಜವಲಿನ್ ಇತರೆ ಆಟಗಳಲ್ಲಿ ಭಾಗವಹಿಸಿದ್ದರು.

ಸುರೇಶ ವಗ್ಗೆ, ರಾಕೇಶ ಚವ್ಹಾಣ ಅರುಣ ನಾಗರಾಜ, ಭೀಮರೆಡ್ಡಿ ಬಾಲನಗೌಡ, ಮಹ್ಮದ್‌ಪಾಷ ಅವರಿಂದ ಸಚಿವರು ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಕಾಮಂತ ಏರಿ ಸ್ವಾಗತಿಸಿದರು. ಖಜಾಂಚಿ ಶ್ರೀಮಂತ ಪಟ್ಟೇದಾರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಜ್ ಜವಳಿ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸುರೇಶ ವಗ್ಗೆ, ಶರಣುಕುಮಾರ ಟೆಂಗಳಿ, ಅಬ್ದುಲ್ ಖಯೂಮ್, ಅನಿಲ್ ಬಿ.ಜಿ. ಗಿರೀಶ ಜಮಖಂಡಿ ಸೇರಿದಂತೆ ರಾಷ್ಟಮಟ್ಟದ ಪ್ರಶಸ್ತಿ ಪಡೆದವರಿಗೆ ಸನ್ಮಾನ ಮಾಡಲಾಯಿತು.

ವೇದಿಕೆ ಮೇಲೆ ರಾಜ್ಯ ಸರ್ಕಾರ ನೌಕರರ ಗೌರವ ಅಧ್ಯಕ್ಷ ಎಲ್.ಸುರೇಶ ಶರ್ಮಾ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳೂಂಡಗಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಎಸ್.ಅಷ್ಟಗಿ, ಅರವಿಂದ ಪಸಾರ , ದಾನಪ್ಪಗೌಡ ಹಳಿಮನಿ, ಮಿಟ್ಟೆಸಾಬ ಮುಲ್ಲಾ, ಸಂಜೀವ ಬಗಲಿ, ಅನೀಲ ಕುಮಾರ ಗುತ್ತೇದಾರ, ಶಿವಕುಮಾರ ಡಂಬಳ, ದೇವಿಂದಪ್ಪ ಹೋಳ್ಕರ್, ಸೇರಿದಂತೆ ಕ್ರೀಡಾ ಕಾರ್ಯದರ್ಶಿ ರಾಕೇಶ ಚವ್ಹಾಣ, ಜಿಲ್ಲೆಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News