ಯಕ್ಷಗಾನ ಕಲೆ ಕರ್ನಾಟಕ ರಾಜ್ಯದ ಕಲೆ: ಡಾ.ಧನಂಜಯ ಕುಂಬ್ಳೆ
ಕಾಸರಗೋಡು: ʼಯಕ್ಷಗಾನ ಕಲೆ ಕರ್ನಾಟಕ ರಾಜ್ಯದ ಕಲೆʼ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ.
ಅವರು ಇಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯುವ ರಾಮಾಯಣ ಮಾಸಾಚರಣೆ ಪ್ರಯುಕ್ತ ಸಪ್ತಾಹದ ಎರಡನೆಯ ಕಾರ್ಯಕ್ರಮವನ್ನು ದೀಪಪ್ರಜ್ವಲನೆ ಮೂಲಕ ಉಧ್ಘಾಟಿಸಿ ಮಾತನಾಡಿದರು.
ʼಯಕ್ಷಗಾನ ಕಲೆ ಕರ್ನಾಟಕ ರಾಜ್ಯದ ಕಲೆ , ಒಬ್ಬ ಕಲಾವಿದನಾಗಿ ಶ್ರೀಯುತ ಮಯ್ಯರು ಕಲೆಯ ಮೇಲಿನ ಅತೀವ ಪ್ರೀತಿಯಿಂದ ಸಿರಿ ಬಾಗಿಲು ಪ್ರತಿಷ್ಠಾನದ ಮೂಲಕ ಭವ್ಯ ಭವನ ನಿರ್ಮಿಸಿ ಕಲೆಯನ್ನು ಪೋಷಿಸುತ್ತಿರುವುದು ತುಂಬಾ ಸಂತೋಷ ತಂದಿದೆʼʼ ಎಂದರು.
ʼʼಯಕ್ಷಗಾನವು ಪ್ರದರ್ಶನಕ್ಕೆ ಸೀಮಿತಗೊಳಿಸದೆ ಅಧ್ಯಯನ ಮೂಲಕ ಹಲವರಿಗೆ ಜಾಗೃತಿ ಮೂಡಿಸುವ ಕಾಯಕ ಸಿರಿಬಾಗಿಲು ಪ್ರತಿಷ್ಠಾನ ನಡೆಸುತ್ತಿದೆ. ಸಾಂಸ್ಕೃತಿಕ ಭವನ ನಿರ್ಮಿಸಿ ನಿರಂತರ ಚಟುವಟಿಕೆಗಳ ಮೂಲಕ ಒಂದು ಸಾಂಸ್ಕೃತಿಕ ವಲಯವನ್ನಾಗಿಸುವ ಪ್ರಯತ್ನ ಯಶಸ್ವಿಯಾಗಲಿ. ರಾಮಾಯಣ ಮಹಾಸಾಚರಣೆಯ ಮೂಲಕ ಯಕ್ಷಗಾನ ತಾಳಮದ್ದಲೆ ಆಯೋಜಿಸಿ ಪೌರಾಣಿಕದ ಕಥೆಗಳಮೂಲಕ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತಿದೆʼʼ ಎಂದು ಶ್ಲಾಘಿಸಿದರು.
ಹಲವಾರು ಸಂಘ ಸಂಸ್ಥೆಗಳು ವಿಭಿನ್ನ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುತ್ತದೆ. ಆದರೂ ಈ ರೀತಿಯಲ್ಲಿ ಕಲಾವಲಯವನ್ನು ಬೆಳಗಿಸುವ ಪೋಷಿಸುವ ಕಾಯಕ ಆಗಬೇಕಿದೆ .ಇದರಿಂದಾಗಿ ಕಲಾವಲಯವು ಬೆಳಗಿ ಮುಂದಿನ ಪೀಳಿಗೆಗೆ ಹಸ್ತಾಂತರವಾಗುತ್ತದೆ .ಮಂಗಳೂರು ವಿಶ್ವವಿದ್ಯಾಲಯವು ಯಕ್ಷಗಾನಕ್ಕೆ ತುಂಬಾ ಕೊಡುಗೆ ನೀಡಿದೆ. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಪ್ರದರ್ಶನಗಳನ್ನು ನಡೆಸಿದೆ .ಪ್ರತಿಷ್ಠಾನದ ಕಾರ್ಯ ಯೋಜನೆಗಳು ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಬಳಿಕ ಶ್ರೀ ಹರಿ ಯಕ್ಷ ಬಳಗ ಮಂಗಳೂರು ಇವರಿಂದ ಭರತಾಗಮನ ಯಕ್ಷಗಾನ ತಾಳಮದ್ದಳೆ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಅರ್ಥಧಾರಿ ಶ್ರೀ ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು.